20 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿದ ಪಾಕ್

ಇಸ್ಲಾಮಾಬಾದ್, ಜ.24- ದೇಶದ ಜಲಪ್ರದೇಶದೊಳಗೆ ಪ್ರವೇಶಿಸಿದ ಆರೋಪದ ಮೇಲೆ ಪಾಕಿಸ್ತಾನದಿಂದ ಬಂಧಿಸಲ್ಪಟ್ಟ 20 ಭಾರತೀಯ ಮೀನುಗಾರರನ್ನು ಸೋಮವಾರ ವಾಘಾ ಗಡಿಯಲ್ಲಿ ಭಾರತಕ್ಕೆ ಹಸ್ತಾಂತರಿಸಲಾಗುವುದು ಎಂದು ಜೈಲಿನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕರಾಚಿಯ ಲಾಂಧಿ ಜೈಲಿನಲ್ಲಿದ್ದ ಮೀನುಗಾರರನ್ನು ಮಾನವೀಯ ನೆಲೆಯಲ್ಲಿ ಭಾನುವಾರ ಬಿಡುಗಡೆ ಮಾಡಲಾಗಿದೆ. ಸೌಹಾರ್ದತೆಯ ಸೂಚಕವಾಗಿ ಈ 20 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡುವುದರೊಂದಿಗೆ ಇದೀಗ 568 ಭಾರತೀಯ ಮೀನುಗಾರರು ಜೈಲಿನಲ್ಲಿ ಉಳಿದಿದ್ದಾರೆ ಎಂದು ಉಪ ಪೊಲೀಸ್ ಅಧೀಕ್ಷಕ ಅಜೀಮ್ ಥೆಬೋ ಹೇಳಿದ್ದಾರೆ ಎಂದು ಡಾನ್ ಪತ್ರಿಕೆ […]