ತಾರಕಕ್ಕೇರಿದ ಪಂಚಮಸಾಲಿ ಮೀಸಲಾತಿ ಸಮರ

ಬೆಂಗಳೂರು,ಜ.14- ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ವಿಷಯ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದ್ದು , ಸರ್ಕಾರ ಮತ್ತು ಹೋರಾಟಗಾರರ ಸಮರಕ್ಕೆ ನಾಂದಿ ಹಾಡಿದೆ.ಇನ್ನೊಂದೆಡೆ ಆಡಳಿರೂಢ ಬಿಜೆಪಿಯ ಸಚಿವರು ಮತ್ತು ಶಾಸಕರ ನಡುವೆ ಒಡಕು ಮೂಡಿದ್ದು ಶಾಸಕ ಬಸನಗೌಡ ಪಾಟೀಲ್ ವಿರುದ್ಧ ಬಹಿರಂಗವಾಗಿಯೇ ಕಿಡಿಕಾರಲಾಗಿದೆ. ಶನಿವಾರದಿಂದ ಹೋರಾಟವನ್ನು ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಬಸವ ಕಲ್ಯಾಣದ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ ಆರಂಭವಾಗಿದ್ದು, ಮೀಸಲಾತಿ ಸಿಗುವವರೆಗೂ ಹೋರಾಟ ನಿಲ್ಲುವುದ್ಲಿಲ ಎಂದು ಗುಡುಗಿದ್ದಾರೆ. ಮೀಸಲಾತಿ ನೀಡಲು ವಿಳಂಬ ಮಾಡುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ […]