ಜೆಡಿಎಸ್ ಪಂಚರತ್ನ ರಥಯಾತ್ರೆಗೆ ಜಾಗತಿಕ ಬೆಂಬಲ

ಬೆಂಗಳೂರು,ಡಿ.4- ಜೆಡಿಎಸ್ ಆರಂಭಿಸಿರುವ ಪಂಚರತ್ನ ರಥಯಾತ್ರೆ ಹಾಗೂ ಪಂಚರತ್ನ ಯೋಜನೆಗಳಿಗೆ ಜಾಗತಿಕವಾಗಿಯೂ ಜನ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಜಗತ್ತಿನ ಯಾವುದೇ ಮೂಲೆಯಲ್ಲಿ ಇದ್ದರೂ ಕನ್ನಡ ಸೊಗಡನ್ನು ಪ್ರೀತಿಸುವ ಸಂತೋಷ್ ಅವರಂಥ ಕನ್ನಡ ಹೃದಯಗಳಿಗೆ ನಾನು ಆಭಾರಿ ಎಂದಿದ್ದಾರೆ. ಜಪಾನ್ ದೇಶದಲ್ಲಿರುವ ಅವರು ಹಾಗೂ ಅವರ ಗೆಳೆಯರು, ಪುಟ್ಟ ಕಂದಮ್ಮ ತೋರಿದ ವಿಶ್ವಾಸಕ್ಕೆ ನನ್ನ ಮನಃಪೂರ್ವಕ ಅಭಿವಂದನೆಗಳು ಎಂದು ಹೇಳಿದ್ದಾರೆ. ಇಂದು ರಾಜಸ್ಥಾನ ಪ್ರವೇಶಿಸಲಿರುವ […]