ಮಾ.8 ರಿಂದ ಮತ್ತೆ ಪಂಚರತ್ನ ರಥಯಾತ್ರೆ ಆರಂಭ

ಬೆಂಗಳೂರು, ಮಾ.5-ಜೆಡಿಎಸ್‍ನ ಪಂಚರತ್ನ ರಥಯಾತ್ರೆ ಮತ್ತು ಜನ ಸಂಪರ್ಕ ಕಾರ್ಯಕ್ರಮವು ಮತ್ತೆ ತುಮಕೂರು ಜಿಲ್ಲೆಯ ತಿಪಟೂರಿನಿಂದ ಮಾ. 8ರಂದು ಮರು ಆರಂಭವಾಗಲಿದ್ದು, ಮಾ.26ರಂದು ಸಮಾರೋಪ ಸಮಾರಂಭ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಪಂಚರತ್ನ ರಥಯಾತ್ರೆ ಈಗಾಗಲೇ ರಾಜ್ಯ 75 ಕ್ಷೇತ್ರಗಳಲ್ಲಿ ಪೂರ್ಣಗೊಂಡಿದೆ. ಮತ್ತೆ 33 ದಿನಗಳ ಕಾಲ ನಡೆಸಲು ತೀರ್ಮಾನಿಸಲಾಗಿದೆ. ಈ ಯಾತ್ರೆ ಮೂಲಕ ಕುಮಾರಸ್ವಾಮಿ ಅವರ ಬಹು ನಿರೀಕ್ಷಿತ ಮಹತ್ವದ ಪಂಚ ಯೋಜನೆಗಳ ಬಗ್ಗೆ ಆಯಾ ಕ್ಷೇತ್ರದ ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ […]
ಮೈಸೂರಿನಲ್ಲಿ ಮಾ.2 6ಕ್ಕೆ ಜೆಡಿಎಸ್ ಪಂಚರತ್ನ ಸಮಾರೋಪ

ಬೆಂಗಳೂರು, ಮಾ.4- ಕೋಲಾರದ ಮುಳಬಾಗಿಲು ವಿಧಾನಸಭಾ ಕ್ಷೇತ್ರದಿಂದ ಪ್ರಾರಂಭಿಸಿರುವ ಜೆಡಿಎಸ್ ಪಂಚರತ್ನ ರಥಯಾತ್ರೆಯ ಸಮಾರೋಪ ಸಮಾರಂಭವು ಮಾರ್ಚ್ 26ರಂದು ಮೈಸೂರಿನಲ್ಲಿ ಜರುಗಲಿದೆ.ಬೆಂಗಳೂರಿನಿಂದ ಮೈಸೂರಿನವರೆಗೆ ಬೃಹತ್ ರೋಡ್ ಶೋ ನಡೆಸಲು ಉದ್ದೇಶಿಸಿದೆ. ಕುಂಬಳಗೋಡಿನಿಂದ ಪ್ರಾರಂಭವಾಗಿ ಮೈಸೂರಿನವರೆಗೆ ಸುಮಾರು 100 ಕೀ.ಮೀ ದೂರ ರೋಡ್ ಶೋ ಮಾಡಲಿದ್ದು, ಆ ರೋಡ್ ಶೋದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರನ್ನು ತೆರೆದ ವಾಹನದಲ್ಲಿ ಕರೆದುಕೊಂಡು ಹೋಗಲು ಯೋಜಿಸಲಾಗಿದೆ. ಅಲ್ಲದೆ, ಸಮಾರೋಪ ಸಮಾವೇಶದಲ್ಲಿ ಹತ್ತು ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದು ಮಾಜಿ […]
ಭದ್ರಾವತಿಯಿಂದ ಪಂಚರತ್ನ ರಥಯಾತ್ರೆ ಪುನಾರಂಭ

ಬೆಂಗಳೂರು,ಫೆ.21-ಮಹಾ ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಕಾಲ ಪಂಚರತ್ನ ರಥಯಾತ್ರೆಗೆ ಬಿಡುವು ನೀಡಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಇಂದಿನಿಂದ ರಥಯಾತ್ರೆಯನ್ನು ಮರು ಆರಂಭ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲಾಯ ಭದ್ರಾವತಿ ಕ್ಷೇತ್ರದಿಂದ ರಥಯಾತ್ರೆ ಶುರುವಾಗಿದ್ದು, ಒಟ್ಟು 9 ಕ್ಷೇತ್ರಗಳಲ್ಲಿ ಈ ಯಾತ್ರೆ ನಡೆಸಲಾಗುತ್ತದೆ. ನಾಳೆ ಶಿವಮೊಗ್ಗ ಗ್ರಾಮಾಂತರ, 23ರಂದು ಸೊರಬ, 24ರಂದು ಯಲ್ಲಾಪುರ ಮತ್ತು ತೀರ್ಥಹಳ್ಳಿ, 25ರಂದು ತೀರ್ಥಹಳ್ಳಿ ಹಾಗೂ ಕೊಪ್ಪ, ಫೆ.26ರಂದು ಶೃಂಗೇರಿ, ಕೊಪ್ಪ, 28ಕ್ಕೆ ಚಿಕ್ಕಮಗಳೂರು ಹಾಗೂ ಮಾರ್ಚ್ 1ರಂದು ಮೂಡಿಗೆರೆ ಕ್ಷೇತ್ರಗಳಲ್ಲಿ […]
ಡಿ 15ರಿಂದ ಪಂಚರತ್ನ ಯಾತ್ರೆ ಮತ್ತೆ ಪ್ರಾರಂಭ

ಬೆಂಗಳೂರು, ಡಿ.12- ಮಳೆ ಯಿಂದಾಗಿ ಮುಂದೂಡಲಾಗಿದ್ದ ಮೊದಲ ಹಂತದ ಜೆಡಿಎಸ್‍ನ ಪಂಚರತ್ನ ರಥಯಾತ್ರೆಯು ಡಿ.15ರಿಂದ ರಾಮನಗರ ಜಿಲ್ಲೆಯ ಮಾಗಡಿ ವಿಧಾನಸಭಾ ಕ್ಷೇತ್ರದಿಂದ ಮತ್ತೆ ಪ್ರಾರಂಭವಾಗಲಿದೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ರಥಯಾತ್ರೆಗೆ ಪಕ್ಷದ ಬೇರೆ ಕಾರ್ಯಕ್ರಮಗಳ ಹಿನ್ನಲೆಯಲ್ಲಿ ಡಿ.7ರಿಂದ 10ರವರೆಗೆ ಬಿಡುವು ನೀಡಲಾಗಿತ್ತು. ಪೂರ್ವ ನಿಗದಿಯಂತೆ ನಿನ್ನೆಯಿಂದ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಪ್ರಾರಂಭವಾಗಬೇಕಿತ್ತು. ನಂತರ ತುರುವೇಕೆರೆ, ತುಮಕೂರು ಗ್ರಾಮಾಂತರ, ಕುಣಿಗಲ್ ಕ್ಷೇತ್ರಗಳಲ್ಲಿ ರಥಯಾತ್ರೆ ನಡೆಯಬೇಕಿತ್ತು. ಆದರೆ, ರಾಜ್ಯದಲ್ಲಿ ಶುಕ್ರವಾರದಿಂದ ಜಿಟಿಜಿಟಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ […]