ಮೈಸೂರಿನಲ್ಲಿ ಪಂಚರತ್ನ ರಥಯಾತ್ರೆ ಸಮಾರೋಪ ಸಮಾವೇಶ

ಬೆಂಗಳೂರು, ಮಾ.26- ಜೆಡಿಎಸ್‍ನ ಮಹತ್ವಾಕಾಂಕ್ಷಿಯ ಪಂಚರತ್ನ ರಥಯಾತ್ರೆಯ ಸಮಾರೋಪದ ಬೃಹತ್ ಸಮಾವೇಶ ಇಂದು ಸಂಜೆ ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ನಡೆಯಲಿದ್ದು, ನಾಡಿನ ಮೂಲೆ ಮೂಲೆಗಳಿಂದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ತಂಡೋಪ ತಂಡವಾಗಿ ಆಗಮಿಸಿದ್ದಾರೆ. ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಲಕ್ಷಾಂತರ ಮಂದಿ ಆಗಮಿಸುತ್ತಿದ್ದು, ಜನಸಾಗರವೇ ಹರಿದು ಬಂದಂತಾಯಿತು. ಜೆಡಿಎಸ್ ಬಾವುಟ ಹಿಡಿದು, ಕೊರಳಲ್ಲಿ ಪಕ್ಷದ ಶಾಲು ಹಾಕಿಕೊಂಡು ಜೈಘೋಷ ಕೂಗುತ್ತಾ ವೇದಿಕೆಯತ್ತ ಕಾರ್ಯಕರ್ತರು ಆಗಮಿಸುತ್ತಿ ದ್ದರು. ರಾಜ್ಯ ವಿವಿಧ ಜಿಲ್ಲೆಗಳಿಂದ ಬಸ್, ಕಾರು, ಜೀಪು ಸೇರಿದಂತೆ ವಿವಿಧ ವಾಹನಗಳ […]

ನಾಳೆ ಮೈಸೂರಿನಲ್ಲಿ ಜೆಡಿಎಸ್ ಪಂಚರತ್ನ ರಥಯಾತ್ರೆ ಸಮಾರೋಪ ಸಮಾವೇಶ

ಬೆಂಗಳೂರು, ಮಾ.25- ಜೆಡಿಎಸ್‍ನ ಪಂಚರತ್ನ ರಥಯಾತ್ರೆಯ ಸಮಾರೋಪ ಸಮಾವೇಶವು ನಾಳೆ ಮೈಸೂರಿನಲ್ಲಿ ನಡೆಯಲಿದ್ದು, ಲಕ್ಷಾಂತರ ಕಾರ್ಯಕರ್ತರು ಅಭಿಮಾನಿಗಳು ಸೇರುವ ಮೂಲಕ ಪಕ್ಷದ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜಗೊಳಿಸಲಾಗಿದೆ. ಮೈಸೂರಿನ ವರ್ತುಲ ರಸ್ತೆ ಬಳಿ ಜ್ವಾಲಾಮುಖಿ ತ್ರಿಪುರಸುಂದರಿಯಮ್ಮ ದೇವಸ್ಥಾನ ಪಕ್ಕದ ಮೈದಾನದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾವೇಶಕ್ಕೂ ಮುನ್ನ ಶ್ರೀರಾಂಪುರದಿಂದ ರೋಡ್ ಷೋ ಮಾಡಲಾಗುತ್ತದೆ. ಸುಮಾರು ಹತ್ತು ಲಕ್ಷ ಕಾರ್ಯಕರ್ತರು, ಅಭಿಮಾನಿಗಳು ಆಗಮಿಸುವ ನಿರೀಕ್ಷೆ ಇದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. ಬೃಹತ್ ಪ್ರಮಾಣದಲ್ಲಿ ಸಮಾವೇಶ ನಡೆಸಲು ಸಿದ್ಧತಾ ಕಾರ್ಯಗಳು […]

ಮಾ. 26ರಂದು ಸಾಂಸ್ಕೃತಿಕ ನಗರಿಯಲ್ಲಿ ಪಂಚರತ್ನ ರಥಯಾತ್ರೆ ಸಮಾರೋಪ

ಮೈಸೂರು, ಮಾ.21- ಬಹು ನಿರೀಕ್ಷಿತ ಪಂಚರತ್ನ ರಥ ಯಾತ್ರೆಯ ಸಮಾರೋಪ ಸಮಾರಂಭವನ್ನು ಮಾ. 26ರಂದು ಮೈಸೂರಿನಲ್ಲಿ ಹಮ್ಮಿಕೊಳ್ಳಲಾಗುವುದು. ಸಮಾವೇಶ ದಲ್ಲಿ ಸುಮಾರು ಹತ್ತು ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಪಂಚರತ್ನ ರಥಯಾತ್ರೆಯಲ್ಲಿ ರಾಜ್ಯದಾದ್ಯಂತ ಅತ್ಯುತ್ತಮವಾದ ರೀತಿಯ ಜನಬೆಂಬಲವನ್ನು ನಾಡಿನ ಜನತೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಆಶೀರ್ವದಿಸಿದ್ದಾರೆ. ಅದಕ್ಕೆ ಪೂರಕವಾಗಿ ಜನತೆಯ ಬೆಂಬಲವನ್ನು ನಾನು ಕಳೆದ 3 ತಿಂಗಳ ರಥಯಾತ್ರೆಯಲ್ಲಿ ಕಂಡಿದ್ದೇನೆ. ಅದು […]

ಪಂಚರತ್ನ ಸಮಾರೋಪ : ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ

ಬೆಂಗಳೂರು, ಮಾ. 17- ಮೈಸೂರಿನಲ್ಲಿ ನಡೆಸಲು ನಿರ್ಧರಿಸಲಾಗಿರುವ ಜೆಡಿಎಸ್ ಪಂಚರತ್ನ ರಥಯಾತ್ರೆಯ ಸಮಾರೋಪದ ಪೂರ್ವಭಾವಿ ಸಭೆ ನಾಳೆ ನಡೆಯಲಿದೆ. ಸಮಾರೋಪ ಸಮಾರಂಭದ ಮೂಲಕ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ ಮಾಡಲು ಉದ್ದೇಶಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಹೆಚ್. ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂದ ನೇತೃತ್ವದಲ್ಲಿ ಮೈಸೂರಿನಲ್ಲಿ ನಡೆಯುವ ಸಮಾರಂಭದ ಪೂರ್ವ ಸಿದ್ಧತಾ ಸಭೆ ಜರುಗಲಿದೆ. ನಾಳೆ ಮಧ್ಯಾಹ್ನ ಜೆ.ಪಿ. ಭವನದಲ್ಲಿ ಈ ಸಭೆ ನಡೆಯಲಿದ್ದು, ಪಕ್ಷದ ಶಾಸಕರು, ನಾಯಕರು ಮುಖಂಡರು ಸಮಾಲೋಚನೆ ನಡೆಸಿ ಪಂಚರತ್ನ […]

ಕಲ್ಯಾಣ ಕರ್ನಾಟಕ ಭಾಗದಲ್ಲಿ ನಾಳೆಯಿಂದ ಪಂಚರತ್ನ ರಥಯಾತ್ರೆ

ಬೆಂಗಳೂರು, ಜ.4- ಜೆಡಿಎಸ್‍ನ ಮಹತ್ವದ ಪಂಚರತ್ನ ರಥಯಾತ್ರೆಯ ಎರಡನೇ ಹಂತವು ನಾಳೆಯಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಾರಂಭವಾಗಲಿದೆ. ಬೀದರ್ ನಿಂದ ನಾಳೆ ಆರಂಭವಾಗಲಿರುವ ಎರಡನೇ ಹಂತದ ಯಾತ್ರೆಯು ಜನವರಿ 12ರವರೆಗೆ ಒಟ್ಟು 8 ದಿನಗಳ ಕಾಲ ನಡೆಯಲಿದೆ. ಬೀದರ್ ಹಾಗೂ ಕಲ್ಬುರ್ಗಿ ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳಲ್ಲಿ ಪಂಚರತ್ನ ರಥಯಾತ್ರೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ನಾಳೆಯಿಂದ ಜ.8ರವರೆಗೆ ಬೀದರ್ ಉತ್ತರ, ಬೀದರ್ ದಕ್ಷಿಣ, ಹುಮ್ನಾಬಾದ್ ಮತ್ತು ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರಗಳಲ್ಲಿ ಪಂಚರತ್ನ ಪಂಚರತ್ನ ಯಾತ್ರೆ ಹಮ್ಮಿಕೊಳ್ಳಲಾಗುತ್ತದೆ. ಜ.9ರಿಂದ […]

ಜೆಡಿಎಸ್ ಪಂಚರತ್ನ ರಥಯಾತ್ರೆಗೆ ವ್ಯಾಪಕ ಜನಬೆಂಬಲ

ಬೆಂಗಳೂರು,ನ.30-ಮುಂಬರುವ ವಿಧಾನ ಚುನಾವಣೆಯಲ್ಲಿ ಬಹುಮತಗಳಿಸಿ ಸ್ವಂತ ಶಕ್ತಿಯ ಮೇಲೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕೆಂಬ ಮಹದಾಸೆ ಹೊಂದಿರುವ ಜೆಡಿಎಸ್ ಆರಂಭಿಸಿರುವ ಮೊದಲ ಹಂತದ ಪಂಚರತ್ನ ರಥಯಾತ್ರೆಗೆ ವ್ಯಾಪಕ ಜನಬೆಂಬಲ ವ್ಯಕ್ತವಾಗುತ್ತಿದೆ. ನ.18ರಂದು ಮುಳಬಾಗಿಲು ವಿಧಾನಸಭಾ ಕ್ಷೇತ್ರದಿಂದ ಪ್ರಾರಂಭವಾದ ಪಂಚರತ್ನ ರಥಯಾತ್ರೆಯು ಈಗಾಗಲೇ ಮೂರು ಜಿಲ್ಲೆಗಳ ಹದಿಮೂರು ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ನಡೆಸಿದೆ. ಜನತಾ ಜಲಧಾರೆಯ ಮಾದರಿಯಲ್ಲೇ ಈ ಯಾತ್ರೆಗೂ ಪ್ರತಿ ಕ್ಷೇತ್ರದಲ್ಲಿ ಅಪಾರ ಪ್ರಮಾಣದಲ್ಲಿ ಜನರು ಸೇರುತ್ತಿದ್ದಾರೆ. ಜತೆಗೆ ಕುಮಾರಸ್ವಾಮಿ ಅವರನ್ನು ವಿವಿಧ ಜಾನಪದ ಕಲಾತಂಡಗಳ ಪ್ರದರ್ಶನ, ಹಣ್ಣು, ತರಕಾರಿ, […]

ಹೆಚ್‌ಡಿಕೆ ಅಡ್ಡಗಟ್ಟಿ ಶಾಲೆಗೆ ಕರೆದೊಯ್ದ ಮಕ್ಕಳು

ಕೋಲಾರ,ನ.23- ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ರೊಜರನಹಳ್ಳಿ ಕ್ರಾಸ್ ಮತ್ತು ಬಂಗವಾದಿ ಗ್ರಾಮದಲ್ಲಿ ನಡೆದ ಪಂಚರತ್ನ ರಥಯಾತ್ರೆಯ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ರಸ್ತೆಯಲ್ಲೇ ಅಡ್ಡಗಟ್ಟಿದ ಶಾಲಾ ಮಕ್ಕಳು ಸೋರುತ್ತಿರುವ ತಮ್ಮ ಶಾಲೆಯ ದರ್ಶನ ಮಾಡಿಸಿದ್ದಾರೆ. ಕುಮಾರಸ್ವಾಮಿ ಅವರನ್ನು ಶಾಲೆಗೆ ಕರೆದುಕೊಂಡು ಹೋದ ಮಕ್ಕಳು ಶ್ರೀನಿವಾಸಪುರ ಕ್ಷೇತ್ರದ ಮಾಸ್ತೇನಹಳ್ಳಿಯ ಶಾಲೆ ಸೋರುತ್ತಿರುವುದನ್ನು ತೋರಿಸಿದ್ದಾರೆ. ಸೋರುತ್ತಿರುವ ಶಾಲೆ, ಶಿಥಿಲವಾದ ಶಾಲಾ ಕಟ್ಟಡ ತೋರಿಸಿ ಮಕ್ಕಳು ಕಣ್ಣೀರಿಟ್ಟು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ರಸ್ತೆಯಲ್ಲೇ ಕುಮಾರಸ್ವಾಮಿ ಅವರನ್ನು ತಬ್ಬಿಕೊಂಡ ಶಾಲಾ ಮಕ್ಕಳು […]

ರಾಜ್ಯದಲ್ಲಿ ಜನ ಬದಲಾವಣೆ ಬಯಸುತ್ತಿದ್ದಾರೆ : ಹೆಚ್‌ಡಿಕೆ

ಬೆಂಗಳೂರು,ನ.21-ರಾಜ್ಯದ ಜನರು ಹೊಸ ಬದಲಾವಣೆಯನ್ನು ಬಯಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಕೋಲಾರ ವಿಧಾನ ಸಭಾಕ್ಷೇತ್ರಕ್ಕೆ ಪಂಚರತ್ನ ರಥಯಾತ್ರೆ ತೆರಳುವ ಮುನ್ನ ಶಿವಾರಪಟ್ಟಣದಲ್ಲಿ ಮಾತನಾಡಿದ ಅವರು, ಕೋಲಾರ ಜಿಲ್ಲಾಯ ಮೂರು ಕ್ಷೇತ್ರಗಳಲ್ಲಿ ಪಂಚರತ್ನ ರಥಯಾತ್ರೆಗೆ ಜನರು ಸ್ವಪ್ರೇರಣೆಯಿಂದ ಬೆಂಬಲ ನೀಡಿದ್ದಾರೆ. ಜನರಿಗೆ ಹೊಸ ಬದಲಾವಣೆ ಬೇಕಾಗಿದೆ ಎಂಬುದು ಕಾಣುತ್ತಿದೆ ಎಂದಿದ್ದಾರೆ. ಪಂಚರತ್ನದ ಅದ್ಬುತ ಕಲ್ಪನೆ ಅನುಷ್ಠಾನ ಮಾಡಲಿಕ್ಕೆ ಸಾಧ್ಯವೆ ಎಂದು ಕೇಳುತ್ತಾರೆ. ಆದರೆ, ಸರ್ಕಾರಕ್ಕೆ ಬದ್ಧತೆ ಇದ್ದರೆ ಯಾವುದು ಅಸಾಧ್ಯವಲ್ಲ. ಸ್ವತಂತ್ರವಾದ ಸರ್ಕಾರವನ್ನು […]

3ನೇ ದಿನಕ್ಕೆ ಕಾಲಿಟ್ಟ ಜೆಡಿಎಸ್ ಪಂಚರತ್ನ ರಥಯಾತ್ರೆ

ಬೆಂಗಳೂರು, ನ.20-ಪಂಚರತ್ನ ರಥಯಾತ್ರೆಯ ಮೂರನೇ ದಿನವಾದ ಮಾಲೂರಿನಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ ನಡೆಸಲಾಯಿತು. ಇಂದು ಬೆಳಿಗ್ಗೆ 10 ಗಂಟೆಗೆ ಮಾಲೂರಿನ ಕೆಂಪಸಂದ್ರದಿಂದ ಪ್ರಾರಂಭವಾದ ರಥಯಾತ್ರೆಯುಹುಣಸಿಕೋಟೆ , ಕೆ ಜಿ. ಹಳ್ಳಿ, ತೊರಲಕ್ಕಿ , ದಿನ್ನಹಳ್ಳಿ, ಮಾಸ್ತಿ, ಕುಡಿಯನೂರು,ಕೋಡಿಹಳ್ಳಿ ಗೇಟ್, ಸಂಪಂಗೆರೆ, ಚಿಕ್ಕತಿರುಪತಿ, ಲಕ್ಕೂರನಲ್ಲಿ ರಥಯಾತ್ರೆ ನಡೆಸಲಾಯಿತು. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ನೇತೃತ್ವದಲ್ಲಿ ಜರುಗಿದ ಈ ರಥಯಾತ್ರೆಗೆ ಭಾರೀ ಜನ ಬೆಂಬಲ ವ್ಯಕ್ತವಾಯಿತು. ಯಾತ್ರೆ ಸಾಗಿದ ಕಡೆಗಳಲ್ಲಿ ಜನರು ಸ್ವಾಗತ ಕೋರಿ ಕುಮಾರಸ್ವಾಮಿ ಅವರಿಗೆ ಸಮಸ್ಯೆಗಳ ಮನವಿ ಸಲ್ಲಿಸಿದರು. […]

ಜೆಡಿಎಸ್‍ ಪಂಚರತ್ನ ರಥಯಾತ್ರೆಗೆ ಅಭೂತಪೂರ್ವ ಬೆಂಬಲ

ಬೆಂಗಳೂರು, ನ.19- ನಿನ್ನೆ ಪ್ರಾರಂಭವಾದ ಜೆಡಿಎಸ್‍ನ ಪಂಚರತ್ನ ರಥಯಾತ್ರೆ ಹಾಗೂ ಗ್ರಾಮ ವಾಸ್ತವ್ಯದ ಕಾರ್ಯಕ್ರಮಕ್ಕೆ ಜನರು ಅಭೂತಪೂರ್ವ ಬೆಂಬಲ ನೀಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಊರುಕುಂಟೆ ಮಿಟ್ಟೂರಿನಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಜನರಿಂದ ಸಿಗುತ್ತಿರುವ ಬೆಂಬಲದಿಂದ ನಮ್ಮ ಮುಂದಿನ ಹೋರಾಟಕ್ಕೆ ಶಕ್ತಿ ತುಂಬಿದಂತಾಗಿದೆ. ಶಿಕ್ಷಣ, ಆರೋಗ್ಯ, ಕೃಷಿಯಲ್ಲಿ ಇರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವ ಕೆಲಸವಾಗಬೇಕು.ಯಾವ ಸರ್ಕಾರ ಕೂಡ ರೈತನಿಗೆ ಶಾಶ್ವತ ಪರಿಹಾರ ನೀಡಿಲ್ಲ ಎಂದು ಹೇಳಿದ್ದಾರೆ. ಉದ್ಯೋಗ ಇಲ್ಲದಿರುವುದರಿಂದ ಯುವಕರಿಗೆ ಮದುವೆಯಾಗಲು […]