ಆಸ್ತಿಯ ವಿವರ ತಿಳಿಯಲು ದಿಶಾಂಕ್ ಸರ್ಕಾರಿ ಆ್ಯಪ್

ಬೆಂಗಳೂರು,ಜ.12- ನಿವೇಶನ, ಮನೆ ಮತ್ತಿತರ ಆಸ್ತಿಗಳ ಸರ್ವೇ ನಕ್ಷೆ ಮಾಡಲು ಇನ್ಮುಂದೆ ಸರ್ವೇಯರ್ ಅಗತ್ಯ ಇಲ್ಲ. ಕೇವಲ ದಿಶಾಂಕ್ ಆ್ಯಪ್‍ನಲ್ಲಿ ಗ್ರಾಮ ಪಂಚಾಯತ್ ಅಧಿಕಾರಿಗಳೇ ಸರ್ವೇ ಮಾಡಿ ಇ-ಸ್ವತ್ತು ತಂತ್ರಾಂಶದಲ್ಲಿ ಇ-ಖಾತಾ ನೀಡುವಂತಹ ಹೊಸ ಯೋಜನೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಆರಂಭಿಸಿವೆ. ದಿಶಾಂಕ್ ಆ್ಯಪ್‍ನಲ್ಲಿ ರಾಜ್ಯದ ಎಲ್ಲಾ ಆಸ್ತಿಗಳ ವಿವರ ಹಾಕಲಾಗಿದ್ದು, ಗೂಗಲ್ ಪ್ಲೇ ಸ್ಟೋರ್‍ನಲ್ಲಿ ಲಭ್ಯವಾಗುವ ಈ ಆ್ಯಪ್ ಸಾರ್ವಜನಿಕರಿಗೆ ಅತ್ಯಂತ ಅನುಕೂಲಕರವಾಗಿದೆ. ಕಂದಾಯ ಇಲಾಖೆಯ ದಾಖಲೆಗಳಲ್ಲಿನ […]