ಜಾಹಿರಾತಿನಲ್ಲಿ ಪಂಡಿತ್ ನೆಹರು ಭಾವಚಿತ್ರ ನಾಪತ್ತೆ, ಕಾಂಗ್ರೆಸ್ ತೀವ್ರ ಆಕ್ಷೇಪ

ಬೆಂಗಳೂರು,ಆ.14-ರಾಜ್ಯ ಸರ್ಕಾರದ ವತಿಯಿಂದ ನೀಡಲಾಗಿರುವ ಆಜಾದಿ ಕಾ ಅಮೃತ ಮಹೋತ್ಸವದ ಜಾಹಿರಾತಿನಲ್ಲಿ ಪಂಡಿತ್ ಜವಹಾರ್ ಲಾಲ್ ನೆಹರು ಅವರ ಭಾವಚಿತ್ರ ಕಾಣೆಯಾಗಿರುವುದಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಈ ಸಂಬಂಧ ಟ್ವೀಟ್‍ವೊಂದನ್ನು ಹಂಚಿಕೆಕೊಂಡಿದ್ದು, ನೆಹರು ಅವರು ಇಂತಹ ಸಣ್ಣತನವನ್ನು ಕ್ಷಮಿಸುತ್ತಾರೆ. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಕೆಲಸವನ್ನು ಉಳಿಸಿಕೊಳ್ಳುವುದಕ್ಕಾಗಿ ಹತಾಶರಾಗಿದ್ದು, ಅವರಿಗೆ ತಾವು ಮಾಡಿರುವ ತಪ್ಪು ಅರಿವಾದಂತಿಲ್ಲ ಎಂದಿದ್ದಾರೆ. ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್. […]