ಮಾದಕವಸ್ತುಗಳ ವಿರುದ್ಧ ಸಿಬಿಐ ಸಂಘಟನಾತ್ಮಕ ಸಮರ

ನವದೆಹಲಿ,ಸೆ.29- ಸಾಮಾಜಿಕ ಪಿಡುಗಾಗಿರುವ ಮಾದಕವಸ್ತುಗಳ ವಿರುದ್ಧ ಸಮರ ಸಾರಿರುವ ಸಿಬಿಐ ಇಂದು ದೇಶಾದ್ಯಂತ ಜಂಟಿ ಶೋಧ ಕಾರ್ಯಾಚರಣೆ ನಡೆಸಿದ್ದು, ಅಪಾರ ಪ್ರಮಾಣದ ಸರಕ್ಕನ್ನು ವಶಪಡಿಸಿಕೊಂಡು 175ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದೆ. ರಾಷ್ಟ್ರೀಯ ಮಾದಕವಸ್ತುಗಳ ನಿಗ್ರಹ ದಳದೊಂದಿಗೆ ಸಿಬಿಐ ಜಂಟಿ ಕಾರ್ಯಾಚರಣೆ ನಡೆಸಿದೆ. ಪಂಜಾಬ್, ಹರಿಯಾಣ, ಗುಜರಾತ್, ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ಮಣಿಪುರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ದಿಢೀರ್ ದಾಳಿ ನಡೆಸಲಾಗಿದೆ. ಆಪರೇಷನ್ ಗರುಡಾ ಹೆಸರಿನ ಈ ಕಾರ್ಯಾಚರಣೆಗೆ ಕಳೆದ ಒಂದು ವಾರದಿಂದ ಪೂರ್ವ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಇಂಟರ್‍ಪೆಪೋಲ್‍ನ […]