ಅರುಣಾಚಲ ಪ್ರದೇಶ ಬಂದ್, ಜನಜೀವನ ಅಸ್ತವ್ಯಸ್ತ

ಇಟಾನಗರ, ಡಿ 27 (ಪಿಟಿಐ) ಅರುಣಾಚಲ ಪ್ರದೇಶ ಲೋಕಸೇವಾ ಆಯೋಗ ನಡೆಸಿದ ಸಹಾಯಕ ಇಂಜಿನಿಯರ್ (ಸಿವಿಲ್) ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಇಂದು ಕರೆ ನೀಡಲಾಗಿದ್ದ ಅರುಣಾಚಲ ಪ್ರದೇಶ ಬಂದ್ ನಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ರಾಜ್ಯ ಸರ್ಕಾರದ ವೈಫಲ್ಯವನ್ನು ವಿರೋಧಿಸಿ ಆಲ್ ನಿಶಿ ಸ್ಟೂಡೆಂಟ್ಸ ಯೂನಿಯನ್ ವಿದ್ಯಾರ್ಥಿ ಒಕ್ಕೂಟವು ಇಂದು ಮುಂಜಾನೆಯಿಂದ ಸಂಜೆವರೆಗೆ ಬಂದ್‍ಗೆ ಕರೆ ನೀಡಿದ್ದರಿಂದ ಎಲ್ಲಾ ಅಂಗಡಿಗಳು ಮತ್ತು ವ್ಯಾಪಾರ ಸಂಸ್ಥೆಗಳು, ಬ್ಯಾಂಕ್‍ಗಳು ಮತ್ತು ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಟ್ಟಿದ್ದವು ಮತ್ತು ಖಾಸಗಿ ಮತ್ತು […]