ಪುರುಷ ನೌಕರರಿಗೆ ಶಿಶುಪಾಲನಾ ರಜಾ

ಬೆಳಗಾವಿ, ಡಿ.29- ಪತ್ನಿ ಮೃತಪಟ್ಟ ಸಂದರ್ಭದಲ್ಲಿ ಮಕ್ಕಳ ಪಾಲನೆ ಜವಾಬ್ದಾರಿ ನಿರ್ವಹಿಸಬೇಕಾದ ಅನಿವಾರ್ಯತೆಗೆ ಸಿಲುಕಿದ ಪುರುಷ ಸರ್ಕಾರಿ ನೌಕರರಿಗೂ ಶಿಶುಪಾಲನಾ ರಜಾ ಸೌಲಭ್ಯ ವಿಸ್ತರಿಸುವ ಕುರಿತು ಪರಿಶೀಲನೆ ನಡೆಸುವುದಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಭರವಸೆ ನೀಡಿದ್ದಾರೆ. ವಿಧಾನಪರಿಷತ್‍ನಲ್ಲಿ ಪ್ರಶ್ನೋತ್ತರದಲ್ಲಿ ಸದಸ್ಯ ನಜೀರ್ ಅಹಮ್ಮದ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, 1 ರಿಂದ 18 ವರ್ಷದವರೆಗೂ ಅಪ್ರಾಪ್ತ ಮಕ್ಕಳೆಂದು ಪರಿಗಣಿಸಲಾಗುತ್ತದೆ. ಅನಂತರ ವಯೋಮಾನದವರನ್ನು ವಯಸ್ಕರೆಂದು ಗುರುತಿಸಲಾಗುವುದು. ಮಕ್ಕಳ ಪಾಲನೆಗೆ ಸರ್ಕಾರಿ ನೌಕರಿಯಲ್ಲಿರುವ ಮಹಿಳೆಯರಿಗೆ 180 […]