ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ್ ಇನ್ನಿಲ್ಲ, ಗಣ್ಯರ ಸಂತಾಪ

ಬೆಂಗಳೂರು,ಫೆ.5-ಪ್ರವಚನ, ಸಂವಾದಗಳ ಮೂಲಕ ಭಾವೈಕ್ಯತೆ ಸಂದೇಶಗಳನ್ನು ಸಾರುತ್ತಿದ್ದ ಕನ್ನಡದ ಕಬೀರ ಎಂದೇ ಪ್ರಖ್ಯಾತರಾಗಿದ್ದ ಪದ್ಮಶ್ರೀ ಪುರಸ್ಕøತ ಇಬ್ರಾಹಿಂ ಸುತಾರ್(76) ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದು, ಇಂದು ಬೆಳಗ್ಗೆ ಹೃದಯಘಾತವಾಗಿದ್ದು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದವರಾದ ಇಬ್ರಾಹಿಂ ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಇಬ್ರಾಹಿಂ ಅವರ ಅಂತ್ಯಕ್ರಿಯೆ ಇಂದು ಮಹಾಲಿಂಗಪುರದಲ್ಲಿ ಸಕಲ ಸರ್ಕಾರಿ […]