ಭಾರತದ ಐಕ್ಯತೆ ಒಡೆಯಲೆತ್ನಿಸುತ್ತಿರುವ ಶತ್ರುಗಳ ವಿರುದ್ಧ ಭಾರತೀಯರು ದೃಢವಾಗಿ ನಿಲ್ಲಬೇಕಿದೆ : ಮೋದಿ

ಕೇವಡಿಯಾ, ಅ.31- ಭಾರತದ ಐಕ್ಯತೆಯನ್ನು ಒಡೆಯಲು ಶತ್ರುಗಳು ನಿರಂತರ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಇದರ ವಿರುದ್ಧ ಭಾರತೀಯರು ದೃಢವಾಗಿ ನಿಲ್ಲಬೇಕಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದಂದು ಗುಜರಾತ್‍ನ ಕೆವಾಡಿಯಾದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲಿ ಮಾತನಾಡಿದ ಅವರು, ಪ್ರಮುಖವಾಗಿ ಭಾನುವಾರ ಗುಜರಾತ್‍ನ ಮೊರ್ಬಿ ಸೇತುವೆ ಕುಸಿತದ ದುರಂತದಲ್ಲಿ ಮೃತಪಟ್ಟವರಿಗೆ ಸಂತಾಪ ಸಲ್ಲಿಸಿ ಭಾವುಕರಾದರು. ನಾನು ಕೆವಾಡಿಯಾದಲ್ಲಿದ್ದೇನೆ, ಆದರೆ ನನ್ನ ಮನಸ್ಸು ಮೋರ್ಬಿಯಾದಲ್ಲಿದೆ. ಈ ರೀತಿಯ ನೋವನ್ನು ನನ್ನ ಜೀವನದಲ್ಲಿ […]