ಗುಜರಾತ್‍ನಲ್ಲಿ ಶಾಂತಿಯುತ ಮತದಾನ

ಅಹಮದಾಬಾದ್,ಡಿ.5- ಗುಜರಾತ್ ವಿಧಾನಸಭೆಯ 93 ಕ್ಷೇತ್ರಗಳಿಗೆ ಇಂದು ಎರಡನೇ ಹಂತದ ಮತದಾನ ನಡೆದಿದೆ.ಬೆಳಗ್ಗೆ ಮಂದಗತಿಯಲ್ಲಿ ಆರಂಭವಾದ ಮತದಾನ, ಬಿಸಿಲೇರುತ್ತಿದ್ದಂತೆ ಚುರುಕು ಪಡೆದಿದೆ. ಪ್ರಧಾನಿ ಸೇರಿದಂತೆ ಅನೇಕ ಪ್ರಮುಖರು ಮುಂಜಾನೆಯೇ ಟ್ವೀಟ್ ಮಾಡಿ, ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ಪ್ರಮುಖವಾದ ಅಹಮದಾಬಾದ್, ವಡೋದರಾ, ಗಾಂಧಿನಗರ ಸೇರಿದಂತೆ ಇತರ 14 ಜಿಲ್ಲೆಗಳ 93 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ. ಆಡಳಿತಾರೂಢ ಬಿಜೆಪಿ ಮತ್ತು ಹೊಸದಾಗಿ ಗುಜರಾತ್ ಅಖಾಡ ಪ್ರವೇಶಿಸಿರುವ ಅರವಿಂದ್ ಕೇಜ್ರಿವಾಲ್ ನೇತೃತ್ವದ ಅಮ್‍ಆದ್ಮಿ ಪಕ್ಷ ಎಲ್ಲಾ ಕ್ಷೇತ್ರಗಳಲ್ಲಿ […]