ಭಾರೀ ಮಳೆಗೆ ನೆಲ ಕಚ್ಚಿದ ಕಾಫಿ, ಮೆಣಸು : ಸಂಕಷ್ಟದಲ್ಲಿ ಬೆಳೆಗಾರರು

ಬೇಲೂರು, ಜು.20- ತಾಲ್ಲೂಕಿನಲ್ಲಿ ಸುರಿದ ಮಳೆಯಿಂದಾಗಿ ವಾಣಿಜ್ಯ ಬೆಳೆಗಳಾದ ಕಾಫಿ, ಮೆಣಸು ಫಸಲು ನಾಶವಾಗಿದ್ದು, ಬೆಳೆಗಾರರು ಸಾಕಷ್ಟು ನಷ್ಟ ಅನುಭವಿಸುವಂತಾಗಿದ್ದು, ಬೆಳೆ ನಷ್ಟಕ್ಕೆ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ. ತಾಲೂಕಿನಲ್ಲಿ ಅದರಲ್ಲೂ ಮಲೆನಾಡು ಭಾಗದ ಬಿಕ್ಕೋಡು, ಅರೇಹಳ್ಳಿ ಹಾಗೂ ಕಸಬಾ ಹೋಬಳಿಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತೋಟದಲ್ಲಿ ನೀರು ನಿಂತು ಗಿಡಗಳು ಕೊಳೆಯಲಾರಂಭಿಸಿದರೆ, ಕಾಫಿ, ಮೆಣಸು, ಅಡಿಕೆ ನಾಶವಾಗಿವೆ. ಇದರಿಂದಾಗಿ ಮುಂಗಾರಿನಲ್ಲೆ ಬೆಳೆಗಾರರು ನಷ್ಟ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಅತಿಯಾದ ಮಳೆಯಿಂದ ತೋಟದೊಳಗೆ ನೀರು ತುಂಬಿದ್ದು, ಮತ್ತೊಂದೆಡೆ […]