ಆದಿಯೋಗಿ ಪ್ರತಿಮೆ ಉದ್ಘಾಟನೆಗೆ ಹೈಕೋರ್ಟ್ ಹಸಿರು ನಿಶಾನೆ

ಬೆಂಗಳೂರು,ಜ.13- ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈಶಾ ಯೋಗ ಕೇಂದ್ರದ ಆದಿಯೋಗಿ ಪ್ರತಿಮೆಯನ್ನು ಜನವರಿ 15 ರಂದು ಉದ್ಘಾಟಿಸಲು ಕರ್ನಾಟಕ ಹೈಕೋರ್ಟ್ ಶುಕ್ರವಾರ ಅನುಮತಿ ನೀಡಿದೆ. ಆದರೆ, ಸ್ಥಳದಲ್ಲಿ ನಿರ್ಮಾಣ ಚಟುವಟಿಕೆಗಳ ಬಗ್ಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದೆ. ಅರಣ್ಯ ಮತ್ತು ಭೂ ಸ್ವಾೀಧಿನಕ್ಕೆ ಸಂಬಂಧಿಸಿದ ವಿವಿಧ ನಿಯಮಗಳು ಮತ್ತು ಕಾನೂನುಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಸಲ್ಲಿಸಲಾಗಿದ್ದ ಅರ್ಜಿ ಆಧರಿಸಿ ಜನವರಿ 11ರಂದು ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ಶುಕ್ರವಾರ, ಈಶಾ ಯೋಗ ಕೇಂದ್ರದ ಪರ ವಕೀಲರು, ಮುಖ್ಯ […]