ಇರಾನ್‍ನಾದ್ಯಂತ ಪ್ರಮುಖ ನಗರಗಳಲ್ಲಿ ವಿದ್ಯಾರ್ಥಿಗಳು-ಭದ್ರತಾ ಪಡೆ ನಡುವೆ ಘರ್ಷಣೆ

ಟೆಹ್ರಾನ್,ಅ. 31-ಇರಾನ್‍ನಾದ್ಯಂತ ವಿಶ್ವವಿದ್ಯಾನಿಲಯಗಳು ಹಾಗು ಪ್ರಮುಖ ನಗರಗಳಲ್ಲಿ ವಿದ್ಯಾರ್ಥಿಗಳು ಹಾಗು ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆದಿದೆ. ಮೊದಲಿಗೆ ಟೆಹ್ರಾನ್‍ನ ಆಜಾದ್ ವಿಶ್ವವಿದ್ಯಾನಿಲಯದಲ್ಲಿ ಘರ್ಷಣೆಗಳು ಆರಂಭಗೊಂಡಿದ್ದು ಭದ್ರತಾ ಪಡೆಗಳು ವಿದ್ಯಾರ್ಥಿಗಳ ಮೇಲೆ ಅಶ್ರುವಾಯು ಮತ್ತು ಗುಂಡು ಹಾರಿಸುತ್ತಿರುವ ದೃಶ್ಯಗಳು ಸಾಮಾಜಿಕ ತಾಣದಲ್ಲಿ ಕಂಡುಬಂದಿದೆ. ದೇಶದ ಅರೆಸೇನಾಪಡೆಯ ರೆವಲ್ಯೂಷನರಿ ಗಾರ್ಡ್‍ನ ಬೆದರಿಕೆಗಳ ಹೊರತಾಗಿಯೂ ರಾಷ್ಟ್ರವ್ಯಾಪಿ ಸ್ವಾತಂತ್ರ್ಯ, ಸ್ವಾತಂತ್ರ್ಯ, ಸ್ವಾತಂತ್ರ್ಯ ಎಂಬ ಘೋಷಣೆನ್ನು ಪ್ರತಿಭಟನಾಕಾರರು ಕೂಗುತ್ತಿದ್ದು ಪರಿಸ್ಥಿತಿ ಉಲ್ಬಣಗೊಂಡಿದೆ ಎಂದು ಇರಾನ್ ಮಾಧ್ಯಮ ವರದಿ ಮಾಡಿದೆ, ದಕ್ಷಿಣ ಇರಾನ್‍ನ ಪ್ರಮುಖ ಶಿಯಾ […]