ಅಗ್ನಿಪತ್ ಯೋಜನೆಗೆ ನ್ಯಾಯಾಲಯದ ಬೆಂಬಲ : ಆಕ್ಷೇಪಣಾ ಅರ್ಜಿಗಳು ವಜಾ

ನವದೆಹಲಿ,ಫೆ.27- ಸೇನೆಯ ನೇಮಕಾತಿಯಲ್ಲಿ ಕಳೆದ ವರ್ಷ ಜಾರಿಗೊಳಿಸಲಾಗಿದ್ದ ಹೊಸ ಯೋಜನೆ ಅಗ್ನಿಪತ್ ಅನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ಗುಚ್ಚವನ್ನು ದೆಹಲಿ ಹೈಕೋರ್ಟ್ ಇಂದು ವಜಾಗೊಳಿಸಿದೆ. ರಾಷ್ಟ್ರೀಯ ಹಿತಾಸಕ್ತಿ ರಕ್ಷಣೆ ಮತ್ತು ಸಶಸ್ತ್ರ ಪಡೆಗಳನ್ನು ಸುಸಜ್ಜಿತಗೊಳಿಸಲು ಅಗ್ನಿಪತ್ ಪೂರಕವಾಗಿದೆ ಎಂದು ದೆಹಲಿ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೋನಿಯಂ ಪ್ರಸಾದ್ ಅವರ ಪೀಠ ಅಭಿಪ್ರಾಯಪಟ್ಟಿದ್ದು, ಯೋಜನೆಯಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಕಾರಣವಿಲ್ಲ ಎಂದು ಹೇಳಿ ತರಕಾರು ಅರ್ಜಿಗಳನ್ನು ವಜಾಗೊಳಿಸಿದೆ. ಕನ್ನಡಿಗನ ಸಂಶೋಧನೆ: ಮಕ್ಕಳಿಗೆ […]