ಪೆಟ್ರೋಲ್ ಟ್ಯಾಂಕ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಇಬ್ಬರು ಸಾವು

ತುಮಕೂರು, ಜ.25- ಪೆಟ್ರೋಲ್ ಟ್ಯಾಂಕ್ ಸ್ವಚ್ಛಗೊಳಿಸಲು ಟ್ಯಾಂಕ್‍ಗೆ ಇಳಿದ ಕಾರ್ಮಿಕರಿಬ್ಬರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ತಿಪಟೂರು ನಗರದ ಹಿಂಡಿಸ್ಕೆರೆ ಗೇಟ್ ಬಳಿ ನಡೆದಿದೆ. ಅರಸೀಕೆರೆ ತಾಲೂಕಿನ ಹಾರ್ನಹಳ್ಳಿ ನಿವಾಸಿ ನಾಗರಾಜು (55), ತಮಿಳುನಾಡಿನ ವೇಲೂರು ಮೂಲದ ರವಿ (38) ಮೃತಪಟ್ಟ ದುರ್ದೈವಿಗಳು. ಪ್ರಸನ್ನಕುಮಾರ್ ಎಂಬುವವರಿಗೆ ಸೇರಿದ ಪೆಟ್ರೋಲ್ ಬಂಕ್‍ನ ಟ್ಯಾಂಕ್ ಸ್ವಚ್ಛಗೊಳಿಸಲು ನಾಗರಾಜ್ ಟ್ಯಾಂಕ್ ಒಳಗೆ ಇಳಿದಿದ್ದಾನೆ. ಈ ವೇಳೆ ಆಮ್ಲಜನಕದ ಕೊರತೆ ಉಂಟಾಗಿ ಉಸಿರುಗಟ್ಟಿದ್ದಾನೆ. ಟ್ಯಾಂಕ್‍ನಿಂದ ಮೇಲೆ ಬರಲು ಒದ್ದಾಡುತ್ತಿದ್ದು, ರಕ್ಷಣೆಗಾಗಿ ರವಿಯನ್ನು ಕರೆದಿದ್ದಾನೆ. ಈ […]