ಒತ್ತಡ ನಿಭಾಯಿಸಲಾಗದೆ ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ

ಭೂಪಾಲ್,ಜ.5- ಮಾನಸಿಕ ಒತ್ತಡವನ್ನು ಸಹಿಸಲಾಗುತ್ತಿಲ್ಲ ಎಂದು ಪತ್ರ ಬರೆದಿಟ್ಟು ವೈದ್ಯಕೀಯ ಸ್ನಾತಕ್ಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಅರವಳಿಕೆ ಇಂಜೆಕ್ಷನ್ ಚುಚ್ಚಿಕೊಂಡು ಹಾಸ್ಟೇಲ್‍ನಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ. ಮಧ್ಯ ಪ್ರದೇಶದ ಭೂಪಾಲ್‍ನ ಸರ್ಕಾರಿ ಸ್ವಾಮ್ಯದ ಗಾಂಧಿ ಮೆಡಿಕಲ್ ಕಾಲೇಜಿನಲ್ಲಿ ಮಕ್ಕಳ ತಜ್ಞತೆಯಲ್ಲಿ ಸ್ನಾತಕ್ಕೋತ್ತರ ಪದವಿಗಾಗಿ ಒಂದು ತಿಂಗಳ ಹಿಂದೆ ದಾಖಲಾಗಿದ್ದ ಆಕಾಂಕ್ಷ ಮಹೇಶ್ವರಿ ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗ್ಗೆ 7 ಗಂಟೆಗೆ ಪೋಷಕರ ಜೊತೆ ಮಾತನಾಡಿದ್ದಾಳೆ, ನಂತರ 2.5ಎಂ.ಎಲ್.ನಷ್ಟು ನಾಲ್ಕು ಡೋಸ್ […]