ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೆಗೆ ಫೆ.15 ರಿಂದ ಟೋಲ್ ಫಿಕ್ಸ್

ಬೆಂಗಳೂರು,ಫೆ.2- ಮಹತ್ವಾಕಾಂಕ್ಷೆಯ ಮೈಸೂರು- ಬೆಂಗಳೂರು ಎಕ್ಸಪ್ರೆಸ್ ಕಾರಿಡಾರ್ ರಸ್ತೆಯಲ್ಲಿ ಫೆ.15ರೊಳಗೆ ಟೋಲ್ ಸಂಗ್ರಹಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಕಾಮಗಾರಿಯು ಮೊದಲ ಹಂತದಲ್ಲಿ ಬೆಂಗಳೂರು-ಚನ್ನಪಟ್ಟಣದ ನಿಡಘಟ್ಟದವರೆಗೂ ನಡೆದಿತ್ತು. ಇದು 56 ಕಿಮೀ ಒಳಗೊಂಡಿತ್ತು. ಎರಡನೇ ಹಂತದ ಕಾಮಗಾರಿ ನಿಡಘಟ್ಟದಿಂದ ಮೈಸೂರಿನವರೆಗೆ ನಡೆಯುತ್ತಿದೆ. 61 ಕಿ.ಮೀ. ಕಾಮಗಾರಿ ಭರದಿಂದ ಸಾಗುತ್ತಿದೆ. ಇದೀಗ ಮೊದಲ ಹಂತದ ಬೆಂಗಳೂರು-ನಿಡಘಟ್ಟ ಟೋಲ್ಸಂಗ್ರಹಕ್ಕೆ ಹೆದ್ದಾರಿ ಪ್ರಾಕಾರ ತೀರ್ಮಾನಿಸಿದೆ. ಮೊದಲ ಹಂತದ ಕಾಮಗಾರಿ ಮುಗಿದಿದ್ದು, ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿದೆ. ಎರಡನೇ ಹಂತದ ಕಾಮಗಾರಿ ಭರದಿಂದ ಸಾಗುತ್ತಿದೆ. […]