ದುಬಾರಿ ಮೊಬೈಲ್‍ಗಳನ್ನು ಎಗರಿಸುತ್ತಿದ್ದ ನಾಲ್ವರ ಬಂಧನ

ಬೆಂಗಳೂರು,ಡಿ. 7- ಮೊಬೈಲ್‍ಗಳನ್ನು ಎಗರಿಸುತ್ತಿದ್ದ ಶಿವಮೊಗ್ಗ ಮೂಲದ ಮೂವರು ಸೇರಿದಂತೆ ನಾಲ್ವರನ್ನು ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿ, 9 ಲಕ್ಷ ರೂ. ಬೆಲೆಬಾಳುವ 27 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ರಾಘವೇಂದ್ರ(27), ಕಿರಣ್(28), ಶೌಕತ್ ಅಲಿ(28) ಮತ್ತು ಬೆಂಗಳೂರಿನ ಬನಶಂಕರಿಯಬಲರಾಮ(38) ಬಂಧಿತ ಆರೋಪಿಗಳು. ಬಂಧಿತರಿಂದ ಐದು ಒನ್‍ಪ್ಲೆಸ್ ಮೊಬೈಲ್, 8 ವಿವೋ ಮೊಬೈಲ್‍ಗಳು, ನಾಲ್ಕು ರೆಡ್ಮಿ ಮೊಬೈಲ್, ಎರಡು ಎಂಐ ಮೊಬೈಲ್, ನಾಲ್ಕು ಸ್ಯಾಮ್‍ಸಾಂಗ್, ಒಂದು ಹಾನರ್ ಮೊಬೈಲ್, ಲಾವ, ಓಪೊ, ಎಕ್ಸಿಮಿ ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. […]
ಶಾಲೆಗಳಲ್ಲಿ ಮೊಬೈಲ್ ಬಳಕೆ ನಿಷೇಧಕ್ಕೆ ಸರ್ಕಾರ ಸಿದ್ಧತೆ

ಬೆಂಗಳೂರು,ನ.26- ಶಾಲೆಗಳಲ್ಲಿ ಮೊಬೈಲ್ ಬಳಕೆ ನಿಷೇಧಕ್ಕೆ ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಮೊಬೈಲ್ ಮುಕ್ತ ದಿನ ನಿಯಮ ಜಾರಿಗೆ ತರಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಮೊಬೈಲ್ ಬಳಕೆಯಿಂದ ಮಕ್ಕಳಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳಾಗುತ್ತಿದೆ. ಆದ್ದರಿಂದ ಶಾಲೆಗಳಲ್ಲಿ ಮೊಬೈಲ್ ಬಳಕೆ ನಿಷೇಧ ನಿಯಮ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದೆ. ಬ್ಯಾಗ್ ಲೆಸ್ ಡೇ ಬಳಿಕ ಮೊಬೈಲ್ ಲೆಸ್ ಡೇ ಪ್ರಯತ್ನಕ್ಕೆ ಮುಂದಾಗಿದ್ದು, ಪೋಷಕರ ಅಭಿಪ್ರಾಯದ ಮೇರೆಗೆ ಸರ್ಕಾರ ಈ ಬಗ್ಗೆ ಚಿಂತನೆ ನಡೆಸಿದೆ […]
BIG NEWS : ಪೆಗಾಸಸ್ ಬೇಹುಗಾರಿಕೆ ಪ್ರಕರಣದ ತನಿಖಾ ವರದಿ ಸುಪ್ರೀಂಗೆ ಸಲ್ಲಿಕೆ
ನವದೆಹಲಿ,ಆ.25- ಕಳೆದ ವರ್ಷ ಭಾರೀ ಸಂಚಲನ ಮೂಡಿಸಿದ್ದ ಪೆಗಾಸಸ್(ಬೇಹುಗಾರಿಕೆ) ಪ್ರಕರಣದ ತನಿಖೆ ನಡೆಸಿದ ನ್ಯಾಯಮೂರ್ತಿ ರವೀಂದ್ರನ್ ಅವರ ಸಮಿತಿ, ಸುಪ್ರೀಂಕೋರ್ಟ್‍ಗೆ ವರದಿ ನೀಡಿದ್ದು, ಐದು ಫೋನ್‍ಗಳಲ್ಲಿ ಸಂಶಯಾಸ್ಪದ ಗೂಡಾಚಾರಿಕೆ ನಡೆದಿರುವುದು ಕಂಡುಬಂದಿದೆ ಎಂದು ಹೇಳಿದೆ. ಕೇಂದ್ರ ಸರ್ಕಾರ ಇಸ್ರೇಲ್ ಮೂಲದ ಕಂಪೆನಿಯಿಂದ ಸೇನಾ ಗೂಡಾಚಾರಿಕೆಗೆ ಬಳಸುವ ಪೆಗಾಸಸ್ ಸಾಫ್ಟ್‍ವೇರ್‍ನನ್ನು ಖರೀದಿಸಿ ಅದನ್ನು ಪ್ರತಿ ಪಕ್ಷಗಳ ನಾಯಕರು, ನ್ಯಾಯಾಂಗದ ಅಧಿಕಾರಿಗಳು, ವಕೀಲರು, ಸಮಾಜಿಕ ಕಾರ್ಯಕರ್ತರು, ಪತ್ರಕರ್ತರು ಸೇರಿದಂತೆ ಇತರೆ ಪ್ರಮುಖರ ಮೇಲೆ ಬೇಹುಗಾರಿಕೆಗೆ ಬಳಕೆ ಮಾಡಿತ್ತು ಎಂಬ ಆರೋಪಗಳು […]
ಇಬ್ಬರು ಮೊಬೈಲ್ ಸುಲಿಗೆಕೋರರ ಸೆರೆ, 512 ಸ್ಮಾರ್ಟ್ ಫೋನ್ ವಶ
ಬೆಂಗಳೂರು,ಆ.11- ಸರಣಿ ಮೊಬೈಲ್ ಸುಲಿಗೆ ಮಾಡಿ ಹೊರ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿ, 78.84 ಲಕ್ಷ ರೂ. ಮೌಲ್ಯದ 512 ಸ್ಮಾರ್ಟ್‍ಫೋನ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಪಾದರಾಯನಪುರದ ನಿವಾಸಿ ಅಜ್ಮಲ್ ಪಾಷಾ ಮತ್ತು ಶಿವಾಜಿನಗರದ ನಿವಾಸಿ ಇಜಾಜ್ ಬಂಧಿತ ಆರೋಪಿಗಳು. ನಗರದ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಮೊಬೈಲ್ ಫೋನ್ ಸುಲಿಗೆ ಪ್ರಕರಣಗಳು ಹೆಚ್ಚಾಗುತ್ತಿದ್ದ ಬಗ್ಗೆ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಗಳಿಗಾಗಿ ಶೋಧ ಕೈಗೊಂಡು ಇಬ್ಬರನ್ನು ಬಂಧಿಸಿದ್ದಾರೆ. ಈ ಇಬ್ಬರು ಆರೋಪಿಗಳು 7ರಿಂದ 8 ಜನರ […]