ಜಮ್ಮು-ಕಾಶ್ಮೀರ ಪೊಲೀಸರಿಗೆ ಶಕ್ತಿ ಶಾಲಿ ಶಾಸ್ತ್ರಾಸ್ತ್ರಗಳ ಖರೀದಿ

ಜಮ್ಮು, ಜ.4- ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಜಮ್ಮು-ಕಾಶ್ಮೀರದ ಪೊಲೀಸರು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಲಿದ್ದು, ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಮತ್ತಷ್ಟು ಶಕ್ತಿಶಾಲಿಗಳಾಗಲಿದ್ದಾರೆ. ಅಮೆರಿಕ ನಿರ್ಮಿತ ಸಿಗ್‍ಸೌರ್-716 ರೈಫಲ್‍ಗಳು ಮತ್ತು ಎಂಪಿಎಕ್ಸ್-9ಎಂಎಂ ಪಿಸ್ತೂಲ್‍ಗಳನ್ನು ಜಮ್ಮು-ಕಾಶ್ಮೀರದ ಪೊಲೀಸರಿಗಾಗಿ ಖರೀದಿಸಲಾಗುತ್ತಿದೆ. ಪಾಕಿಸ್ತಾನ ಮತ್ತು ಚೀನಾದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಜಮ್ಮು-ಕಾಶ್ಮೀರದಲ್ಲಿ ಪದೇ ಪದೇ ಅಪಾಯಕಾರಿ ಸನ್ನಿವೇಶಗಳು ಎದುರಾಗುತ್ತಿವೆ. ಉಗ್ರರ ಸುಳುವಿಕೆ, ಗಡಿ ಪ್ರಚೋದನೆಯ ವಿರುದ್ಧ ಸೈನಿಕ ಜತೆ ಪೊಲೀಸರು ಕೂಡ ಹೋರಾಟ ನಡೆಸಬೇಕಿದೆ. ಗಡಿಯೊಳಗೆ ನುಸುಳುವ ಉಗ್ರರು ಹಲವಾರು ವಿದ್ವಂಸಕ ಕೃತ್ಯಗಳಿಗೂ […]