ಐಫೋನ್ ತಯಾರಿಕಾ ಘಟಕ ಸ್ಥಾಪನೆಗೆ ಸ್ಥಳ ವೀಕ್ಷಣೆ

ಬೆಂಗಳೂರು, ಮಾ.3-ಜಗತ್ತಿನ ಮುಂಚೂಣಿ ಕಂಪನಿಗಳಲ್ಲಿ ಒಂದಾಗಿರುವ ತೈವಾನ್ ಮೂಲದ ಫಾಕ್ಸ್ಕಾನ್ ಸಮೂಹದ ಸಿಇಒ ಮತ್ತು ಅಧ್ಯಕ್ಷ ಯಂಗ್ ಲಿಯು ನೇತೃತ್ವದ ಉನ್ನತ ಮಟ್ಟದ ನಿಯೋಗವು ರಾಜ್ಯದಲ್ಲಿ ಆಪಲ್ ಫೋನ್ ತಯಾರಿಕಾ ಘಟಕ ಸ್ಥಾಪಿಸುವ ಸಂಬಂಧ ಸ್ಥಳ ವೀಕ್ಷಣೆಗೆ ಆಗಮಿಸಿದ್ದು, ಐಟಿ-ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರೊಂದಿಗೆ ಇಂದು ಮೊದಲ ಸುತ್ತಿನ ಚರ್ಚೆ ನಡೆಸಿತು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕಂಪನಿಯ 17 ಉನ್ನತಾಧಿಕಾರಿಗಳನ್ನು ಒಳಗೊಂಡ ನಿಯೋಗವನ್ನು ಬರಮಾಡಿಕೊಂಡ ಸಚಿವರು, ರಾಜ್ಯದಲ್ಲಿ ಐಟಿ, ತಾಂತ್ರಿಕ ಶಿಕ್ಷಣ, […]

ಹುಟ್ಟುವ ಪ್ರತಿ ಮಗುವಿಗೆ 100 ಗಿಡ ನೆಡುವ ಅಭಿಯಾನಕ್ಕೆ ಚಾಲನೆ

ಗ್ಯಾಂಗ್ಟಾಕ್, ಫೆ.3 – ಹಿಮಾಲಯ ರಾಜ್ಯ ಸಿಕಿಂನಲ್ಲಿ ಜನಿಸುವ ಪ್ರತಿ ಮಗುವಿಗೆ 100 ಮರಗಳನ್ನು ನೆಡುವ ಅಭಿಯಾನಕ್ಕೆ ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಚಾಲನೆ ನೀಡಿದ್ದಾರೆ. ಮೇರೋ ರುಖ್ ಮೇರೋ ಸಂತತಿ (ಮರವನ್ನು ನೆಡಿರಿ, ಪರಂಪರೆ ನಡೆ) ಎಂಬ ಯೋಜನೆಯು ಮಗು ಜನನದ ನೆನಪಿಗಾಗಿ ಮರಗಳನ್ನು ನೆಡುವ ಮೂಲಕ ಪೋಷಕರು, ಮಕ್ಕಳು ಮತ್ತು ಪ್ರಕೃತಿಯ ನಡುವಿನ ಸಂಬಂಧ ಬಲಪಡಿಸುವ ಗುರಿಯನ್ನು ಹೊಂದಿದೆ. ಮಗು ಬೆಳೆದಂತೆ ಮರಗಳು ಬೆಳೆಯುವುದನ್ನು ನೋಡುವುದು ಸಂತಸ ಮತ್ತು ಈ ಭೂಮಿಗೆ ಆಗಮನದ […]

ಚೀನಾದಲ್ಲಿ ಸ್ಫೋಟ : 2 ಸಾವು, 12 ಕಾರ್ಮಿಕರು ನಾಪತ್ತೆ

ಬೀಜಿಂಗ್, ಜ.16 – ಈಶಾನ್ಯ ಚೀನಾದ ರಾಸಾಯನಿಕ ಘಟಕದಲ್ಲಿ ಸಂಭವಿಸಿದ ಭಾರೀ ಸ್ಪೋಟದಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 12 ಮಂದಿ ನಾಪತ್ತೆಯಾಗಿದ್ದಾರೆ. ರಾಜಧಾನಿ ಬೀಜಿಂಗ್‍ನ ಪೂರ್ವದಲ್ಲಿರುವ ಲಿಯಾನಿಂಗ್ ಪ್ರಾಂತ್ಯದ ಪಂಜಿನ್ ನಗರದ ಹೊರವಲಯದಲ್ಲಿ ಕಳೆದ ರಾತ್ರಿ ಈ ದುರಂತ ಸಂಭವಿಸಿದ್ದು ಘಟನೆಯಲ್ಲಿ 34 ಜನರು ಗಾಯಗೊಂಡಿದ್ದಾರೆ. ರಾಸಾಯನಿಕ ಸಂಸ್ಕರಣಾ ಯಂತ್ರಗಳು, ಪೈಪ್‍ಗಳು ಮತ್ತು ಶೇಖರಣಾ ಪಾತ್ರೆಗಳ ಸಂಕೀರ್ಣದಿಂದ ಬೆಂಕಿ ಜ್ವಾಲೆಗಳು ಮತ್ತು ದಟ್ಟವಾದ ಕಪ್ಪು ಹೊಗೆ ಏರುತ್ತಿರುವುದನ್ನು ಸ್ಥಳೀಯ ಆಡಳಿತ ಛಾಯಾಚಿತ್ರ ಬಿಡುಗಡೆ ಮಾಡಿದೆ. ನೇಪಾಳದಲ್ಲಿ […]

ಕೊಳವೆ ಬಾವಿ ಹಗರಣ : ಬಿಬಿಎಂಪಿ ಮಾಜಿ ಸದಸ್ಯರಿಗೆ ಕಂಟಕ

ಬೆಂಗಳೂರು,ಜ.2- ಕೊಳವೆ ಬಾವಿ ಹಾಗೂ ಶುದ್ಧ ಕುಡಿಯುವ ನೀರು ಘಟಕ ಸ್ಥಾಪಿಸುವ ಯೋಜನೆಯಲ್ಲಿ ನಡೆದಿದೆ ಎನ್ನಲಾದ 969 ಕೋಟಿ ರೂ. ಅವ್ಯವಹಾರ ಪ್ರಕರಣದ ಬೆನ್ನು ಹತ್ತಿರುವ ಜಾರಿ ನಿರ್ದೇಶಾನಾಲಯದ ಅಧಿಕಾರಿಗಳು ತಪ್ಪಿತಸ್ಥ ಬಿಬಿಎಂಪಿ ಅಧಿಕಾರಿಗಳ ಬೆವರಿಳಿಸಿದ್ದು, ಕೆಲವು ಅಧಿಕಾರಿಗಳು ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಬಿಬಿಎಂಪಿ ಮಾಜಿ ಸದಸ್ಯರ ಹೆಸರೇಳಿರುವುದರಿಂದ ಕೆಲವು ಮಾಜಿ ಸದಸ್ಯರುಗಳಿಗೆ ನಡುಕ ಶುರುವಾಗಿದೆ. ಕಳೆದ ನಾಲ್ಕು ದಿನಗಳಿಂದ ಬಿಬಿಎಂಪಿಯ ಹಲವಾರು ಎಂಜಿನಿಯರ್‍ಗಳ ವಿಚಾರಣೆ ನಡೆಸುತ್ತಿರುವ ಇಡಿ ಅಧಿಕಾರಿಗಳು ಕೋಟ್ಯಂತರ ರೂ.ಗಳ ಹಗರಣದ ಬಗ್ಗೆ ಇಂಚಿಂಚು […]

ಇರಾನ್: ಹೊಸ ಪರಮಾಣು ವಿದ್ಯುತ್ ಸ್ಥಾವರ ನಿರ್ಮಾಣ

ಕೈರೋ, ಡಿ 4 -ದೇಶದ ನೈಋತ್ಯದಲ್ಲಿ ಹೊಸ ಪರಮಾಣು ವಿದ್ಯುತ್ ಸ್ಥಾವರ ನಿರ್ಮಾಣವನ್ನು ಪ್ರಾರಂಭಿಸಿದೆ ಎಂದು ಇರಾನ್ ಸ್ಟೇಟ್ ಟಿವಿ ತಿಳಿಸಿದೆ. ಅಮೆರಿಕ ಜೊತೆಗಿನ ಭಿನ್ನಾಭಿಪ್ರಾಯ ಮತ್ತು ದೇಶದಲ್ಲಿ ಸದ್ಯ ಮಹಿಳಾ ಹಕ್ಕಿಗಾಗ ನಡೆಯುತ್ತಿರುವ ಹೋರಾಟದಿಂದ ಇರಾನ್ ತತ್ತರಿಸಿ ಹೋಗಿದೆ ಇದರ ನಡುವೆ ಈ ಮಾಹಿತಿ ಹೊರಬಿದ್ದಿರುವುದು ಅಚ್ಚರಿ ಮೂಡಿಸಿದೆ. ಕರೂನ್ ಎಂದು ಕರೆಯಲ್ಪಡುವ ಹೊಸ 300-ಮೆಗಾವ್ಯಾಟ್ ಸ್ಥಾವರವನ್ನು ನಿರ್ಮಿಸಲು ಎಂಟು ವರ್ಷಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಸುಮಾರು 2 ಬಿಲಿಯನ್ ಡಾಲರ್ ವೆಚ್ಚವಾಗುತ್ತದೆ ಎಂದು ದೇಶದ ರಾಜ್ಯ […]

ಭಾರತದ ಫೋರ್ಡ್ ಕಂಪನಿಯನ್ನು ಖರೀದಿಸಿದ ಟಾಟಾ ಸಂಸ್ಥೆ

ನವದೆಹಲಿ, ಆ. 8- ಆಟೋ ಮೊಬೈಲ್ ದಿಗ್ಗಜ ಸಂಸ್ಥೆ ಟಾಟಾ ಮೋಟರ್ಸ್ ಈಗ ಭಾರತದಲ್ಲಿನ ಅಮೆರಿಕ ಮೂಲದ ಫೋರ್ಡ್ ಕಂಪೆನಿಯ ಸ್ವತ್ತನ್ನು ಖರೀದಿಸಲು ಮುಂದಾಗಿದೆ. ಭಾರತದಲ್ಲಿರುವ ಕಾರ್ಖಾನೆಗಳು, ಉಪಕರಣಗಳು ಹಾಗೂ ಸಿಬ್ಬಂದಿಗಳನ್ನು ಟಾಟಾ ಸಮೂಹ ಸಂಪೂರ್ಣವಾಗಿ ಸುಮಾರು 7.26 ಬಿಲಿಯನ್ ರೂ.ಗಳಿಗೆ ಖರೀದಿಸುವ ಪ್ರಕ್ರಿಯೆ ನಡೆದಿದೆ. ಈಗಾಗಲೇ ಜಾಗ್ವರ್, ಲ್ಯಾಂಡ್ ರೋವರ್‍ನ್ನು ಸ್ವಾೀಧಿನಪಡಿಸಿ ಕೊಂಡಿರುವ ಟಾಟಾ ಜಾಗತಿಕವಾಗಿ ತನ್ನ ಪ್ರಮುಖ್ಯತೆಯನ್ನು ಹೆಚ್ಚಿಸಿ ಕೊಳ್ಳುವ ನಿಟ್ಟಿನಲ್ಲಿ ಭಾರತದಲ್ಲಿನ ಫೋರ್ಡ್ ಕಂಪೆನಿಯ ಸ್ವತ್ತನ್ನು ತನ್ನ ವ್ಯಾಪ್ತಿಗೆ ವಿಲೀನಗೊಳಿಸಿಕೊಳ್ಳುತ್ತಿದೆ. ಗುಜರಾತ್‍ನ ಪಶ್ಚಿಮ […]