ನೋಟು ಅಮಾನ್ಯೀಕರಣ ಕುರಿತ ವಿಚಾರಣೆ ಅ.12ಕ್ಕೆ ಮುಂದೂಡಿಕೆ

ನವದೆಹಲಿ, ಸೆ.28- ಕೇಂದ್ರದ ಸರ್ಕಾರ 2016 ರಲ್ಲಿ ಕೈಗೊಂಡ ನೋಟು ಅಮಾನ್ಯೀಕರಣ ನಿರ್ಧಾರ ಸೂಕ್ತವಾದುದ್ದೆ ಎಂಬುದನ್ನು ಪರಿಶೀಲಿಸುವುದಾಗಿ ಹೇಳಿರುವ ಸುಪ್ರೀಂಕೋರ್ಟ್, ಮುಂದಿನ ವಿಚಾರಣೆಯನ್ನು ಅಕ್ಟೋಬರ್ 12ಕ್ಕೆ ಮುಂದೂಡಿದೆ. ನ್ಯಾಯಮೂರ್ತಿ ಎಸ್.ಎ.ನಜೀರ್ ನೇತೃತ್ವದ ಸಂವಿಧಾನ ಪೀಠವು ವಿಚಾರಣೆ ಆರಂಭಿಸುತ್ತಿದ್ದಂತೆ, ಈ ಹಂತದಲ್ಲಿ ನೋಟು ಅಮಾನ್ಯೀಕರಣ ಪರಿಗಣನೆ ಅಗತ್ಯವೇ ಎಂದು ಅಚ್ಚರಿ ವ್ಯಕ್ತ ಪಡಿಸಿದೆ. ಕೇಂದ್ರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಎಲ್ಲಾ ಪ್ರಾಯೋಗಿಕ ಉದ್ದೇಶಗಳಿಗಾಗಿ ಈ ವಿಷಯವು ಪರಿಗಣನೆಗೆ ಉಳಿಯುವುದಿಲ್ಲ. ಆದಾಗ್ಯೂ, ಪ್ರಕರಣವನ್ನು ಪರಿಶೀಲಿಸಬಹುದು […]