ಉತ್ತರಾಖಂಡ್ ಕ್ಯಾಪ್, ಮಣಿಪುರ ಉತ್ತರೀಯ ಧರಿಸಿ ಗಮನ ಸೆಳೆದ ಪ್ರಧಾನಿ ಮೋದಿ

ನವದೆಹಲಿ,ಜ.26- ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಸಾಂಪ್ರದಾಯಿಕ ಉತ್ತರಾಖಂಡ್ ಟೋಪಿ(ರಾಜ್ಯ ಪುಷ್ಪವಾದ ಬ್ರಹ್ಮಕಮಲ ಚಿತ್ರ ಸಹಿತ) ಮತ್ತು ಮಣಿಪುರದ ಉತ್ತರೀಯ ಧರಿಸಿ ಗಮನ ಸೆಳೆದರು. ಮೋದಿ ಅವರು ಕೇದಾರನಾಥದಲ್ಲಿ ಧ್ಯಾನ-ಪ್ರಾರ್ಥನೆ ನೆರವೇರಿಸುವಾಗಲೆಲ್ಲ ಬ್ರಹ್ಮ ಕಮಲವನ್ನು ಬಳಸುತ್ತಾರೆ ಎಂದು ಅಕೃತ ಮೂಲಗಳು ತಿಳಿಸಿವೆ.   ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ಸಂದರ್ಭಗಳಲ್ಲಿ ಪೇಟ, ರುಮಾಲು ಅಥವಾ ಕ್ಯಾಪ್‍ಗಳನ್ನು ವಿಭಿನ್ನವಾಗಿ ಆಯ್ಕೆ ಮಾಡಿಕೊಳ್ಳುವುದು ವಿಶಿಷ್ಟ ಸಂಗತಿ ಎನಿಸಿದೆ.