ನಾಳೆ ಷಂಷಾಬಾದ್‍ನಲ್ಲಿ ಶ್ರೀ ರಾಮಾನುಜಾಚಾರ್ಯರ ಬೃಹತ್ ಪ್ರತಿಮೆ ಅನಾವರಣ

ಹೈದರಾಬಾದ್, ಫೆ.4- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫೆಬ್ರವರಿ 5ರಂದು ಇಲ್ಲಿನ ಷಂಷಾಬಾದ್‍ನಲ್ಲಿ ನಿರ್ಮಿಸಲಾಗಿರುವ ಭಕ್ತಿಸಂತ ಶ್ರೀರಾಮಾನುಜಾಚಾರ್ಯ ಅವರ ಸ್ಮಾರಕವಾಗಿ 216 ಅಡಿ ಎತ್ತರದ ಸಮಾನತೆಯ ಪ್ರತಿಮೆಯನ್ನು ದೇಶಕ್ಕೆ ಸಮರ್ಪಣೆ ಮಾಡಲಿದ್ದಾರೆ. ಶ್ರೀ ರಾಮಾನುಜರು ನಂಬಿಕೆ, ಜಾತಿ, ಮತ ಸೇರಿದಂತೆ ಬದುಕಿನ ಸಕಲ ಸ್ತರಗಳಲ್ಲಿ ಸಮಾನತೆಯ ಚಿಂತನೆಯನ್ನು ಪ್ರರ್ವಸಿದವರು. ಈ ಪ್ರತಿಮೆಯನ್ನು ಪಂಚಲೋಹ (ಚಿನ್ನ, ಬೆಳ್ಳಿ, ತಾಮ್ರ, ಕಂಚು ಮತ್ತು ಸತುವು) ಗಳಿಂದ ನಿರ್ಮಿಸಲಾಗಿದೆ. ಇದು ಪ್ರಪಂಚದ ಅತಿ ಎತ್ತರದ ಕುಳಿತಿರುವ ಭಂಗಿಯ ಲೋಹದ ಪ್ರತಿಮೆಗಳಲ್ಲಿ ಒಂದಾಗಿದೆ. […]