216 ಅಡಿ ಎತ್ತರದ ರಾಮಾನುಜಾಚಾರ್ಯರ ಪ್ರತಿಮೆ ಅನಾವರಣ ಮಾಡಲಿದ್ದಾರೆ ಮೋದಿ

ಹೈದರಾಬಾದ್, ಫೆ.5- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೈದರಾಬಾದ್ ಸಮೀಪದ ಷಂಷಾಬಾದ್‍ನಲ್ಲಿ 11ನೆ ಶತಮಾನದ ವೈಷ್ಣವ ಸಂತ ಶ್ರೀರಾಮಾನುಜಾಚಾರ್ಯ ಅವರ 216 ಅಡಿ ಎತ್ತರದ ಪ್ರತಿಮೆಯನ್ನು ಇಂದು ಅನಾವರಣ ಮಾಡಲಿದ್ದಾರೆ. ಹೈದರಾಬಾದ್‍ಗೆ ಪ್ರಧಾನಿಯವರ ಭೇಟಿಯನ್ನು ಕಳೆದ ತಿಂಗಳು ಪ್ರಕಟಿಸಲಾಗಿತ್ತು. ಶ್ರೀ ರಾಮಾನುಜಾಚಾರ್ಯ ಆಶ್ರಮದ ಚಿನ್ನ ಜೀಯರ್ ಸ್ವಾಮೀಜಿ ಕಳೆದ ವರ್ಷದ ಸೆಪ್ಟೆಂಬರ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ನಗರವನ್ನು ಸಂದರ್ಶಿಸುವಂತೆ ಆಹ್ವಾನಿಸಿದ್ದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಮತ್ತು ದೇಶ-ವಿದೇಶಗಳ ಹಲವಾರು ಗಣ್ಯರನ್ನು […]