ನಾಳೆ ಪ್ರಧಾನಿ ಮೋದಿ ಮಂಗಳೂರಿಗೆ, ಬಿಜೆಪಿಯಲ್ಲಿ ರಣೋತ್ಸಾಹ
ಬೆಂಗಳೂರು, ಸೆ.1- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಳೆ ವಿವಿಧ ಯೋಜನೆಗಳನ್ನು ಲೋಕಾರ್ಪಣೆ ಮಾಡಲು ಮಂಗಳೂರಿಗೆ ಆಗಮಿಸಲಿದ್ದು, ಆಡಳಿತಾರೂಢ ಬಿಜೆಪಿಯಲ್ಲಿ ರಣೋತ್ಸಾಹ ಮೂಡಿದೆ. ವಿವಿಧ ಯೋಜನೆಗಳನ್ನು ಉದ್ಘಾಟಿಸಿದ ಬಳಿಕ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಲಿದ್ದಾರೆ. ಇದು ಸಹಜವಾಗಿ ಕಮಲ ಪಡೆಯಲ್ಲಿ ಉತ್ಸಾಹ ಹೆಚ್ಚುವಂತೆ ಮಾಡಿದೆ.ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಹಿಂದೂ ಕಾರ್ಯಕರ್ತರ ಕಗ್ಗೂಲೆ, ಹಲ್ಲೆ , ಕಾರ್ಯಕರ್ತರ ರಾಜೀನಾಮೆ ಸೇರಿದಂತೆ ಹಲವಾರು ಘಟನೆಗಳಿಂದ ಬಿಜೆಪಿಯಲ್ಲಿ ಒಂದು ರೀತಿ ನಿರುತ್ಸಾಹದ ವಾತಾವಾರಣ ನಿರ್ಮಾಣವಾಗಿತ್ತು. ಇದೀಗ ನರೇಂದ್ರ […]