ಮಕರ ಸಂಕ್ರಾಂತಿ, ಪ್ರಧಾನಿ ಮೋದಿ ಶುಭಾಶಯ

ನವದೆಹಲಿ, ಜ.14- ಬೆಳೆಕೊಯ್ಲು ಋತು ಮತ್ತು ಸೂರ್ಯನ ಉತ್ತರಾಭಿಮುಖ ಪಯಣಕ್ಕೆ ಸಂಬಂಧಿಸಿದ ವಿವಿಧ ಹಬ್ಬಗಳ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರದ ಜನತೆಗೆ ಶುಭ ಕೋರಿದ್ದಾರೆ. ಭಾರತದಾದ್ಯಂತ ಜನತೆ ವಿವಿಧ ಹಬ್ಬಗಳನ್ನು ಆಚರಿಸುತ್ತಿದ್ದು, ದೇಶದ ಶ್ರೀಮಂತ ಸಾಂಸ್ಕøತಿಕ ವೈವಿಧ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದ್ದಾರೆ. ಪೊ0ಗಲ್ ಹಬ್ಬವು ತಮಿಳುನಾಡಿನ ಸಾಂಸ್ಕøತಿಕ ವೈಭವದ ಪ್ರತೀಕವಾಗಿದೆ. ಈ ವಿಶೇಷ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಮತ್ತು ವಿಶೇಷವಾಗಿ ಜಗತ್ತಿನೆಲ್ಲೆಡೆ ಹರಡಿರುವ ತಮಿಳು ಜನತೆಗೆ ನನ್ನ ಶುಭಕಾಮನೆಗಳು. ಪ್ರಕೃತಿಯೊಂದಿಗೆ ನಮ್ಮ ಬಾಂಧವ್ಯ ಮತ್ತು […]