ಅಧಿವೇಶನ ಆರಂಭಕ್ಕೂ ಮುನ್ನ ಸಂಸದರಿಗೆ ಮೋದಿ ಕಿವಿಮಾತು

ನವದೆಹಲಿ, ಜ.31- ಚುನಾವಣಾ ನಡೆಯುತ್ತಿರುವುದರಿಂದ, ಈ ಹಂತದಲ್ಲಿ ರಾಜಕೀಯ ಮಾಡದೆ ಸಂಸತ್ನಿಲ್ಲಿ ಗುಣಮಟ್ಟದ ಚರ್ಚೆಯಲ್ಲಿ ಭಾಗವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಸಂಪ್ರದಾಯದಂತೆ ಇಂದು ಅಧಿವೇಶನದಲ್ಲಿ ಭಾಗವಹಿಸುವ ಮುನ್ನಾ ಸಂಸತ್ನಧ ಹೊರಗೆ ಸುದ್ದಿಗಾರರೊಂದಿಗೆ ಚುಟುಕಾಗಿ ಮಾತನಾಡಿದ ಪ್ರಧಾನಿ ಅವರು, ಚುನಾವಣೆಗಳು ಕಾಲ ಕಾಲಕ್ಕೆ ನಡೆಯುತ್ತಲೇ ಇರುತ್ತವೆ. ಆದರೆ ಬಜೆಟ್ಇಡೀ ವರ್ಷ ದೇಶದ ಅಭಿವೃದ್ಧಿಯ ನೀಲ ನಕ್ಷೆಯನ್ನು ತಯಾರಿಸುತ್ತದೆ. ಸಂಸತ್‍ ನಲ್ಲಿ ನಡೆಯುವ ಮುಕ್ತ ಮನಸ್ಸಿನಿಂದ ಒಳ್ಳೆಯ ಚರ್ಚೆಗಳು ಜಾಗತಿಕವಾಗಿ ಪರಿಣಾಮ ಬೀರಲಿವೆ. ಬಹುಮುಖ್ಯ ಅವಕಾಶಗಳನ್ನು ಒದಗಿಸಲಿವೆ […]