ಬೆಂಗಳೂರಿನಲ್ಲಿ ವಿಷವಾಗುತ್ತಿದೆ ಗಾಳಿ, ತಜ್ಞರ ಎಚ್ಚರಿಕೆ

ಬೆಂಗಳೂರು,ಅ.27- ಹಾನಿಕಾರಕ ಪಟಾಕಿಗಳಿಗೆ ನಿಷೇಧವಿದ್ದರೂ ಜನ ಮಾತ್ರ ಪಟಾಕಿ ಸಿಡಿಸುವುದನ್ನು ಬಿಡದಿರುವ ಹಿನ್ನಲೆಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ವಿಷದ ಗಾಳಿಗೆ ತುತ್ತಾಗುತ್ತಿದ್ಯಾ ಎಂಬ ಅನುಮಾನ ಕಾಡತೊಡಗಿದೆ.ನಿಷೇಧದ ನಡುವೆಯೂ ಪಟಾಕಿ ಸ್ಪೋಟ ಹೆಚ್ಚುತ್ತಿರುವುದರಿಂದ ನಗರದ ವಾಯು ಮಾಲಿನ್ಯ ಕಲುಷಿತಗೊಂಡಿರುವುದು ಅಂಕಿ ಅಂಶಗಳಲ್ಲಿ ಬಹಿರಂಗಗೊಂಡಿದೆ. ಇದೇ ರೀತಿ ವಾಯು ಮಾಲಿನ್ಯಕ್ಕೆ ಎಡೆ ಮಾಡಿಕೊಟ್ಟರೆ ನಗರದ ಗಾಳಿ ವಿಷವಾಗುವ ಸಾಧ್ಯತೆಗಳಿವೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಾವಿರಾರು ಮಂದಿ ಪಟಾಕಿ ಸಿಡಿಸಿದ್ದರಿಂದ ನಗರದಲ್ಲಿ ವಾಯು ಮಾಲಿನ್ಯ ಹೆಚ್ಚಳಗೊಂಡಿರುವುದು […]

ವಿಷ ಆಹಾರ ಸೇವಿಸಿ 30 ಮಕ್ಕಳು ಅಸ್ವಸ್ಥ

ಮದ್ದೂರು,ಸೆ.17- ತಾಲೂಕಿನ ಅಂಬರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಹಲ್ಲಿ ಬಿದ್ದ ಆಹಾರ ಸೇವನೆ ಮಾಡಿ 30 ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಶಾಲೆಯಲ್ಲಿ ಒಟ್ಟು 53 ವಿದ್ಯಾರ್ಥಿಗಳಿದ್ದು, 48 ಮಕ್ಕಳು ಶಾಲೆಗೆ ಹಾಜರಾಗಿದ್ದರು. ಮಧ್ಯಾಹ್ನದ ಬಿಸಿಯೂಟದ ಸಾಂಬಾರಿಗೆ ಹಲ್ಲಿ ಬಿದ್ದಿದ್ದು, ಮಕ್ಕಳು ಊಟದ ತಟ್ಟೆಯಲ್ಲಿ ಹಲ್ಲಿಯ ತುಂಡುಗಳು ಕಾಣಿಸಿಕೊಂಡು ಶಿಕ್ಷಕರಿಗೆ ತಿಳಿಸಿದಾಗ ಮುಖ್ಯ ಶಿಕ್ಷಕಿ ಲಕ್ಷ್ಮೀ ಮಕ್ಕಳು ಊಟ ಮಾಡದಂತೆ ತಡೆದು ತಕ್ಷಣ ಮಕ್ಕಳಿಗೆ ಉಪ್ಪಿನ ನೀರನ್ನು ಕುಡಿಸಿ ವಾಂತಿ ಮಾಡಿಸಿದ್ದಾರೆ. ನಂತರ ಮಕ್ಕಳಲ್ಲಿ ವಾಂತಿ […]