ವಿಷ ಪೂರಿತ ಮದ್ಯ ಸೇವಿಸಿ ಐವರ ಸಾವು

ಬಿಹಾರ್(ನಳಂದ), ಜ.15- ವಿಷ ಪೂರಿತ ಮದ್ಯ  ಸೇವನೆಯಿಂದ ಐವರು ಸಾವನ್ನಪ್ಪಿರುವ ಘಟನೆ ನಳಂದ ಜಿಲ್ಲೆಯಲ್ಲಿ ನಡೆದಿದ್ದು , ಇಬ್ಬರ ಸ್ಥಿತಿ ಗಂಭೀರವಾಗಿದೆ. ಬಿಹಾರ್ ಕೆಲವು ರಾಜ್ಯಗಳಲ್ಲಿ ವಿಷ ಪೂರಿತ ಮದ್ಯ ಸೇವನೆಯಿಂದ ಆಗಾಗ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ನಿನ್ನೆ ಐವರು ಸಾವನ್ನಪ್ಪಿರುವ ಘಟನೆ ಸೊಹ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಛೋಟಿಪಹಡಿ ಮತ್ತು ಪಹಾಡ್‍ತಲ್ಲಿ ಎಂಬ ಗ್ರಾಮಗಳಲ್ಲಿ ಈ ಘಟನೆ ನಡೆದಿದೆ. ಭಾಗೋ ಮಿಸ್ತ್ರಿ(55), ಮುನ್ನಾ ಮಿಸ್ತ್ರಿ(55), ಧರ್ಮೇಂದ್ರ(50), ನಾಗೇಶ್ವರ್(50) ಮತ್ತು ಕಾಳಿಚರಣ್ ಮಿಸ್ತ್ರಿ (50) ಮೃತಪಟ್ಟವರಾಗಿದ್ದಾರೆ. […]