ಮಹಿಳೆಗೆ ಇನ್ಸ್ ಪೆಕ್ಟರ್ ಲೈಂಗಿಕ ಕಿರುಕುಳ : ತನಿಖೆ ನಡೆಸಿ ವರದಿ ನೀಡುವಂತೆ ಆಯುಕ್ತರ ಆದೇಶ

ಬೆಂಗಳೂರು,ಜ.20- ಮಹಿಳೆಯೊಬ್ಬರಿಗೆ ಹೆಣ್ಣೂರು ಠಾಣೆ ಇನ್ಸ್ಪೆಕ್ಟರ್ ವಸಂತ್ಕುಮಾರ್ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ನೀಡುವಂತೆ ಕೆಜಿ ಹಳ್ಳಿ ಉಪವಿಭಾಗದ ಎಸಿಪಿ ಜಗದೀಶ ಅವರಿಗೆ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ. ಘಟನೆ ಸಂಬಂಧ ನಿನ್ನೆ ಮಹಿಳೆ ಆಯುಕ್ತರ ಕಚೇರಿಗೆ ತೆರಳಿ ಇನ್ಸ್ಪೆಕ್ಟರ್ ವಿರುದ್ಧ ಆರೋಪ ಮಾಡಿ ದೂರು ನೀಡಿದ್ದರು. ಅಲ್ಲದೆ ಮಾಧ್ಯಮಗಳ ಮುಂದೆಯೂ ತನಗಾದ ಅನ್ಯಾಯದ ಬಗ್ಗೆ ಹೇಳಿಕೆ ನೀಡಿದ್ದರು.  ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿ ಸಂಪೂರ್ಣ ವರದಿ ನೀಡುವಂತೆ ಆಯುಕ್ತರಾದ ಕಮಲ್ […]