ಮಹಿಳೆಯನ್ನು ವಂಚಿಸಿದ್ದ ಮುಖ್ಯ ಪೊಲೀಸ್ ಪೇದೆ ಅರೆಸ್ಟ್

ಮೈಸೂರು,ಫೆ.26- ವಿವಾಹವಾಗುವುದಾಗಿ ನಂಬಿಸಿ ವಿವಾಹಿತ ಮಹಿಳೆಯಿಂದ ಪತಿಗೆ ವಿಚ್ಛೇದನ ಕೊಡಿಸಿದ್ದಲ್ಲದೇ ಮದುವೆಯಾಗದೇ ವಂಚಿಸಿ ಆಕೆ ಮೇಲೆ ಹಲ್ಲೆ ನಡೆಸಿದ ಮುಖ್ಯಪೇದೆಯನ್ನು ಹುಲ್ಲಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಹುಲ್ಲಹಳ್ಳಿ ಠಾಣೆಯ ಮುಖ್ಯಪೇದೆ ಸಿ.ಕೃಷ್ಣ ನನ್ನು ಬಂಧಿಸಲಾಗಿದೆ. ಪ್ರಕರಣದ ಹಿನ್ನೆಲೆ: ಮದುವೆ ಆಗುವುದಾಗಿ ನಂಬಿಸಿ ಮಹಿಳೆಗೆ ವಂಚಿಸಿದ ಪೇದೆಯ ವಿರುದ್ಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿತ್ತು. ನ್ಯಾಯ ಕೇಳಲು ಬಂದ ಮಹಿಳೆಯನ್ನ ಪೇದೆ ಹಾಗೂ ಆತನ ಮಗ ಹಿಗ್ಗಾ ಮುಗ್ಗಾ ಥಳಿಸಿ ಜಮೀನಿನಲ್ಲಿ ತಳ್ಳಿ ಪರಾರಿಯಾಗಿದ್ದ. […]