ಸಾಮಾಜಿಕ ಜಾಲತಾಣ ದೊಡ್ಡ ಸವಾಲಾಗಿದೆ : ನ್ಯಾ.ಚಂದ್ರಚೂಡ್

ನವದೆಹಲಿ,ನ.12- ಪ್ರಸ್ತುತ ದಿನಮಾನಗಳಲ್ಲಿ ಸಾಮಾಜಿಕ ಜಾಲತಾಣ ದೊಡ್ಡ ಸವಾಲಾಗಿದೆ ಎಂದು ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅಭಿಪ್ರಾಯಪಟ್ಟಿದ್ದಾರೆ. ಹಿಂದೂಸ್ತಾನ್ ಟೈಮ್ಸ್ ಸುದ್ದಿ ಸಂಸ್ಥೆ ಆಯೋಜಿಸಿದ್ದ ನಾಯತ್ವ ಸಮಾವೇಶದ ಕೊನೆಯ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಟ್ವಿಟರ್, ಟೆಲಿಗ್ರಾಂ, ಇನ್‍ಸ್ಟಾಗ್ರಾಮ್‍ನಲ್ಲಿ ನ್ಯಾಯಾೀಧಿಶರ ಮೌಲ್ಯಮಾಪನಗಳು ನಡೆಯುತ್ತಿವೆ. ನ್ಯಾಯಾೀಧಿಶರು ಸುಮ್ಮನೆ ಇದ್ದರೆ ಅದರ ಪರಿಣಾಮ ನಿರ್ಣಯ ತೆಗೆದುಕೊಳ್ಳವುದರ ಮೇಲೆ ಅಪಾಯಕಾರಿಯಾಗಿರುತ್ತದೆ. ಈ ನಿಟ್ಟಿನಲ್ಲಿ ನಮ್ಮಷ್ಟಕ್ಕೆ ನಾವು ಸಮಕಾಲೀನ ಸವಾಲುಗಳಿಗೆ ಮರುಗಳಿಕೆ, ಮರು ಆಲೋಚನೆ ಮತ್ತು ಪುನರ್ ವಿನ್ಯಾಸಗೊಳ್ಳುವ […]