ಕೋವಿಡ್ ನೆಪದಲ್ಲಿ ಚುನಾವಣೆ ಮುಂದೂಡುವ ಯತ್ನ ನಡೀತಿದೆ : ಡಿಕೆಶಿ

ಬೆಳಗಾವಿ,ಡಿ.22- ಕೋವಿಡ್ ನೆಪವಿಟ್ಟುಕೊಂಡು ಚುನಾವಣೆ ಮುಂದೂಡುವ ಯತ್ನ ವನ್ನು ಸರ್ಕಾರ ನಡೆಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ರಾಜ್ಯದ ಪೊಲೀಸ್ ಮಹಾನಿರ್ದೇಶಕರ ಬಳಿ ಚರ್ಚೆ ನಡೆಸಲಾಗಿದೆ. ಸಂಪುಟದಲ್ಲೂ ಚರ್ಚೆ ನಡೆಯುತ್ತಿದೆ. ದೆಹಲಿಯ ಪ್ರಧಾನಿ ಕಚೇರಿಯಿಂದ ದೂರವಾಣಿ ಕರೆ ಬಂದಿದೆ ಎಂಬ ಮಾಹಿತಿ ಇದೆ. ಇದೆಲ್ಲವೂ ಚುನಾವಣೆ ಮುಂದೂಡುವ ಹುನ್ನಾರ. ಅವರು ಯಾವಾಗಲಾದರೂ ಚುನಾವಣೆ ಮಾಡಲಿ ನಮ್ಮ ಪಕ್ಷ ಸಿದ್ಧವಿದೆ ಎಂದರು. ಈ ಹಿಂದೆ ನಾವು ಮೇಕೆದಾಟು ಯಾತ್ರೆ ಮಾಡಿದಾಗ ಕೋವಿಡ್ […]