ಗೋಶಾಲೆಗಳಲ್ಲಿ ಗವ್ಯ ಉತ್ಪನ್ನ ಉತ್ಪಾದಿಸಲು ಚಿಂತನೆ : ಸಚಿವ ಪ್ರಭು ಚವ್ಹಾಣ್

ಬೆಂಗಳೂರು,ಫೆ.13- ನಿರುದ್ಯೋಗ ಹೋಗಲಾಡಿಸುವ ಹಿತದೃಷ್ಟಿಯಿಂದ ಜಿಲ್ಲಾ ಸರ್ಕಾರಿ ಗೋಶಾಲೆಗಳಲ್ಲಿ ಗವ್ಯ ಉತ್ಪನ್ನಗಳನ್ನು ಉತ್ಪಾದಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಬಿ.ಚವ್ಹಾಣ್ ತಿಳಿಸಿದರು. ರಾಜಾನುಕುಂಟೆ ಸಮೀಪದ ಬೂಧಮಾನಹಳ್ಳಿ ಕಾಕೋಳದಲ್ಲಿರುವ ನಾಟಿ ಹಸು ಗೋಶಾಲಾಗೆ ಭೇಟಿ ನೀಡಿ, ಗೋಮಾತೆಗೆ ಪೂಜೆ ಸಲ್ಲಿಸಿ, ನೈವೇದ್ಯ ಸಮರ್ಪಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಕಾರ್ಯಾರಂಭ ಮಾಡಿರುವ, ಜಿಲ್ಲೆಗೊಂದು ಸರ್ಕಾರಿ ಗೋಶಾಲೆಗಳಲ್ಲಿ ಗೋಮಾತೆಯ ಸಂರಕ್ಷಣೆ, ಸಾಕಾಣಿಕೆ, ಪೋಷಣೆ ಜತೆಗೆ ಅಸಹಾಯಕರು ಮತ್ತು ಅಂಗವಿಕಲರಿಗೆ ಉದ್ಯೋಗ ನೀಡುವ […]