ಆತ್ಮ ನಿರ್ಭರ ಗೋಶಾಲೆ ನಿರ್ಮಾಣಕ್ಕೆ ಕೆಂದ್ರದಿಂದ ಅನುದಾನದ ಭರವಸೆ

ದೆಹಲಿ ಫೆ 24 -ರಾಜ್ಯದಲ್ಲಿ ಆತ್ಮ ನಿರ್ಭರ ಗೋಶಾಲೆಯ ಮಾದರಿ ನಿರ್ಮಾಣ ಮಾಡಲು ಕೇಂದ್ರ ಪಶುಸಂಗೋಪನಾ ಸಚಿವ ಪರಶೋತ್ತಮ್ ರೂಪಾಲ್ ಸಲಹೆ ನೀಡಿದ್ದಾರೆ. ಕೇಂದ್ರ ಸಚಿವರನ್ನು ಭೇಟಿಯಾದ ನಂತರ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಈ ಮಾಹಿತಿ ನೀಡಿದ್ದಾರೆ. ಸದ್ಯ ರಾಜ್ಯದಲ್ಲಿ ಪ್ರಾರಂಭ ಮಾಡಿರುವ ಜಿಲ್ಲಾಗೊಂದು ಗೋಶಾಲೆಯನ್ನು ಆತ್ಮ ನಿರ್ಭರ ಗೋಶಾಲೆ ಮಾಡಲು ವ್ಯವಸ್ಥಿತವಾಗಿ ಮಾದರಿ ನಿರ್ಮಾಣ ಮಾಡಿದಲ್ಲಿ ಅದಕ್ಕೆ ಅಗತ್ಯವಿರುವ ಎಲ್ಲ ಅನುದಾನ ನೀಡುತ್ತೇವೆ ಎಂದು ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಗೋಶಾಲೆಗಳಲ್ಲಿ […]