ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ ಪ್ರದೀಪ್ ಮನೆಗೆ ಕಾಂಗ್ರೆಸ್ ನಾಯಕರ ಭೇಟಿ

ಬೆಂಗಳೂರು,ಜ.3- ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ ಪ್ರದೀಪ್ ಅವರ ಮನೆಗೆ ಕಾಂಗ್ರೆಸ್ ನಾಯಕರು ಭೇಟಿ ನೀಡಿ ಸಾಂತ್ವಾನ ಹೇಳಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಇಂದು ಬೆಳಗ್ಗೆ ಬೆಂಗಳೂರಿನಲ್ಲಿರುವ ಅವರ ಮನೆಗೆ ಭೇಟಿ ನೀಡಿದರು. ಪ್ರದೀಪ್ ಅವರ ತಂದೆ, ತಾಯಿ, ಸಹೋದರ ಮತ್ತು ಪತ್ನಿ ನಮೀತಾರನ್ನು ಭೇಟಿ ಮಾಡ ಸಾಂತ್ವಾನ ಹೇಳಿದರು.ಪ್ರದೀಪ್ ಸಾವಿಗೂ ಮುನ್ನಾ ಬರೆದಿರುವ ಮರಣಪತ್ರವನ್ನು […]

ಉದ್ಯಮಿ ಆತ್ಮಹತ್ಯೆ ಪ್ರಕರಣ, ತೀವ್ರಗೊಂಡ ತನಿಖೆ

ಬೆಂಗಳೂರು,ಜ.2- ಮಾಜಿ ಸಚಿವ ಅರವಿಂದ ಲಿಂಬಾವಳಿ ಸೇರಿದಂತೆ ಆರು ಮಂದಿಯ ವಿರುದ್ಧ ಡೆತ್‍ನೋಟ್ ಬರೆದಿಟ್ಟು ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದ ತನಿಖೆಯನ್ನು ಕಗ್ಗಲಿಪುರ ಠಾಣೆ ಪೊಲೀಸರು ತೀವ್ರಗೊಳಿಸಿದ್ದಾರೆ. ಉದ್ಯಮಿ ಪ್ರದೀಪ್ ಕೊನೆಯ ಬಾರಿ ಯಾರಿಗೆ ಕರೆ ಮಾಡಿದ್ದರು, ಯಾರ್ಯಾರ ಜೊತೆ ವ್ಯವಹಾರವಿಟ್ಟು ಕೊಂಡಿದ್ದರು, ಇವರಿಗೆ ಯಾರ್ಯಾರ ಸಂಬಂಧವಿದೆ ಎಂಬಿತ್ಯಾದಿ ವಿವರಗಳನ್ನು ಪಡೆದುಕೊಳ್ಳಲು ಅವರ ಮೊಬೈಲ್‍ನ ಕಾಲ್ ರೆಕಾರ್ಡ್ ಹಾಗೂ ಸಿಡಿಆರ್ ಪಡೆದು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಪ್ರದೀಪ್ ಅವರು ಆತ್ಮಹತ್ಯೆಗೆ ಬಳಸಿರುವ ಪಿಸ್ತೂಲು ಯಾರಿಗೆ ಸೇರಿದ್ದು, ಅದಕ್ಕೆ ಲೈಸೆನ್ಸ್ […]