ಚೆಸ್ : ಗುಜರಾತಿಗೆ ಆಘಾತ ನೀಡಿದ ಪ್ರಜ್ಞಾನಂದ

ವಿಜ್ಕ್‍ಆನ್ ಝೀ, ಜ.27- ಯುವ ಭಾರತೀಯ ಗ್ರ್ಯಾಂಡ್ ಮಾಸ್ಟರ್ ಆರ್.ಪ್ರಜ್ಞಾನಂತ ಅವರು ಸ್ವದೇಶದವರೇ ಆದ ವಿದಿತ್ ಸಂತೋಷ್ ಗುಜರಾತಿ ಅವರ ವಿರುದ್ಧ ಇಲ್ಲಿ ನಡೆಯುತ್ತಿರುವ ಟಾಟಾ ಸ್ಟೀಲ್ ಮಾಸ್ಟರ್ಸ್ ಚೆಸ್ ಪಂದ್ಯಾವಳಿಯಲ್ಲಿ ಸುದೀರ್ಘ 10ನೇ ಸುತ್ತಿನ ಪಂದ್ಯದಲ್ಲಿ ಗೆಲುವು ಸಾಧಿಸಿದರು. ತಮಗಿಂತ ಉನ್ನತ ಶ್ರೇಯಾಂಕ ಹೊಂದಿದ ಗುಜರಾತಿ ಅವರಿಗೆ 78 ನಡೆಗಳಲ್ಲಿ ಆಘಾತ ನೀಡಿದ 16 ವರ್ಷದ ಪ್ರಜ್ಞಾನಂದ ಅವರು ಮೂರು ಪಂದ್ಯಗಳ ಸೋಲಿಗೆ ಅಂತ್ಯ ಹಾಡಿದರು. ಇದು ನಿಮ್ಜೋ-ಇಂಡಿಯನ್ ಕ್ಲಾಸಿಕಲ್ ವಿಧದ ಆಟವಾಗಿತ್ತು. ಎರಡು ಸುತ್ತುಗಳ […]