ಯುಕ್ರೇನನ ಕ್ಲಿಷ್ಟಕರ ಸನ್ನಿವೇಶದಲ್ಲಿ ಭಾರತೀಯರನ್ನು ರಕ್ಷಿಸಿ ಕರೆತರಲಾಗಿದೆ : ಪ್ರಹ್ಲಾದ್ ಜೋಶಿ

ಬೆಳಗಾವಿ,ಫೆ.28- ಬಹಳ ಕ್ಲಿಷ್ಟಕರ ವಿಷಮ ಸನ್ನಿವೇಶದಲ್ಲಿ ಯುಕ್ರೇನನಿಂದ ಭಾರತೀಯರನ್ನು ರಕ್ಷಿಸಿ ಸ್ವದೇಶಕ್ಕೆ ತರಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಪೋಲಂಡ, ರೊಮೇನಿಯಾ ಅಂತಹ ದೇಶಗಳ ಸಹಯೋಗ ಪಡೆಯಲಾಗುತ್ತಿದೆ. ಯುದ್ಧದಲ್ಲಿ ತೊಡಗಿರುವ ಯುಕ್ರೇನ್ ರಷ್ಯಾಗಳ ಜೊತೆಗೂ ಭಾರತ ಮಾತನಾಡುತ್ತಿದೆ. ವಿದೇಶಾಂಗ ಸಚಿವಾಲಯ ಮತ್ತು ಕೇಂದ್ರ ವಿಮಾನಯಾನ ಸಚಿವಾಲಯಗಳು ಭಾರತೀಯರನ್ನು ದೇಶಕ್ಕೆ ಕರೆತರಲು ಎಡೆಬಿಡದ ಪ್ರಯತ್ನ ನಡೆಸಿವೆ ಎಂದರು. ನಿರೀಕ್ಷೆಗೂ ಮೀರಿ ಬಹುಮುಂಚೆಯೇ ಯುದ್ಧ ಪ್ರಾರಂಭವಾಗಿದ್ದರಿಂದ ನಮ್ಮ ನಾಗರಿಕರು […]