ಮೋದಿ ಕರ್ನಾಟಕದಲ್ಲೇ ಬೀಡುಬಿಟ್ಟರೂ ಬಿಜೆಪಿ ಗೆಲ್ಲಿಸಲ್ಲಾಗಲ್ಲ : ಸಿದ್ದರಾಮಯ್ಯ

ಬೀದರ್,ಫೆ.3-ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪದೇ ಪದೇ ಭೇಟಿ ನೀಡುವುದಷ್ಟೇ ಅಲ್ಲ ಪ್ರತಿ ದಿನವೂ ರಾಜ್ಯದಲ್ಲೇ ಬೀಡುಬಿಟ್ಟರೂ ಬಿಜೆಪಿಯನ್ನು ಗೆಲ್ಲಿಸಲು ಸಾಧ್ಯವಿಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸವಾಲೆಸೆದಿದ್ದಾರೆ. ಎರಡನೇ ಹಂತದ ಪ್ರಜಾಧ್ವನಿಯಾತ್ರೆಗೆ ಬಸವಕಲ್ಯಾಣದಿಂದ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ವಿಧಾನಸೌದದ ಯಾವುದೇ ಗೋಡೆಗೆ ಕಿವಿ ಇಟ್ಟರೂ ಲಂಚಾ ಲಂಚಾ ಎಂಬ ಧ್ವನಿ ಕೇಳಿಸುತ್ತದೆ ಎಂದು ಆರೋಪಿಸಿದರು. ಮೇ 3ನೇ ವಾರದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ..? ಶೇ.40ರಷ್ಟು ಕಮಿಷನ್ […]