ಹೊಸ ಅಲೆಗೆ ಕಾರಣವಾಗುವುದೇ ಓಮಿಕ್ರಾನ್ ರೂಪಾಂತರಿ..?
ಬೆಂಗಳೂರು,ಫೆ.7-ಎಲ್ಲಾ ಅನ್‍ಲಾಕ್ ಆಯ್ತು, ಇನ್ನೇನೂ ಕೊರೊನಾ ಕಾಟ ಮುಗಿತು ಎಂದು ಮೈಮರೆಯಬೇಡಿ. ಏಕೆಂದರೆ, ಓಮಿಕ್ರಾನಿನ ಉಪತಳಿ ರೂಪಾಂತರಗೊಂಡಿರುವುದರಿಂದ ಹೊಸ ಅಲೆ ಆರಂಭವಾಗುವ ಭೀತಿ ಎದುರಾಗಿದೆ. ಓಮಿಕ್ರಾನ್ ವೈರಸ್‍ನ ವಂಶವಾಹಿಯಿಂದ ಮತ್ತೊಂದು ವೈರಸ್ ಸೃಷ್ಟಿಯಾಗುವ ಸಾಧ್ಯತೆ ಇದ್ದು, ಇದು ಹೊಸ ಅಲೆ ಆರಂಭಕ್ಕೆ ಕಾರಣವಾಗಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಕೆಲ ದೇಶಗಳಲ್ಲಿ ಬಿಎ.2 ವೈರಸ್ ಹಾವಳಿ ಹೆಚ್ಚಾಗಿದ್ದು, ಈ ರೂಪಾಂತರಿ ನಮ್ಮ ದೇಶದಲ್ಲೂ ಕಾಣಿಸಿಕೊಳ್ಳಲಿವೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ತಜ್ಞರ ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ […]