ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ಅಗ್ನಿಪರೀಕ್ಷೆಯಾಗಲಿರುವ ಪೂರ್ವಭಾವಿ ಸಭೆ

ಬೆಂಗಳೂರು, ನ.22- ವಿಧಾನಸಭೆ ಚುನಾವಣೆಯಲ್ಲಿ ಸ್ರ್ಪಧಿಸಲು ಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳ ಪೈಕಿ, ಗಟ್ಟಿ ಮತ್ತು ಜೋಳ್ಳನ್ನು ವಿಂಗಡಿಸಲು ನವೆಂಬರ್ 25ರಂದು ನಡೆಯುವ ಸಭೆ ಮಹತ್ವದ್ದಾಗಲಿದೆ. ವರ್ತೂರಿನ ಸಮೀಪ ನಡೆಯುವ ಸಭೆಯಲ್ಲಿ ಅರ್ಜಿ ಸಲ್ಲಿಸಿರುವ ಪ್ರತಿಯೊಬ್ಬ ಆಕಾಂಕ್ಷಿಯೂ ಭಾಗವಹಿಸುವಂತೆ ಸೂಚನೆ ನೀಡಲಾಗಿದೆ. ಸಭೆಯಲ್ಲಿ ಭಾಗವಹಿಸುವವರು ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿಯೊಂದು ಬೂತ್‍ನ ಪ್ರತಿಯೊಬ್ಬ ಏಜೆಂಟ್‍ನ ಸಂಪೂರ್ಣ ವಿವರಗಳೊಂದಿಗೆ ಹಾಜರಾಗಬೇಕು ಎಂದು ಸೂಚಿಸಲಾಗಿದೆ. ಕ್ಷೇತ್ರದಲ್ಲಿ ಸಕ್ರಿಯವಾಗಿಲ್ಲದವರಿಗೆ ಈ ಮಾಹಿತಿಗಳು ಲಭ್ಯವಾಗುವುದಿಲ್ಲ. ಸದಸ್ಯತ್ವ ನೋಂದಣಿ, ಕ್ಷೇತ್ರ ಸಮೀಕ್ಷೆ ನಡೆಸಿದವರಿಗೆ ಮಾತ್ರ […]