ಅರ್ಚಕರ ಮೇಲಿನ ದೌರ್ಜನ್ಯವನ್ನು ದಲಿತ ದೌರ್ಜನ್ಯ ಕಾಯ್ದೆ ವ್ಯಾಪ್ತಿಗೊಳಪಡಿಸಲು ಆಗ್ರಹ

ಜೈಪುರ,ಮಾ.12- ಅರ್ಚಕರ ಮೇಲಿನ ದೌರ್ಜನ್ಯಗಳನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಾಯ್ದೆಯ ವ್ಯಾಪ್ತಿಗೆ ಒಳಪಡಿಸಿ ಜಾಮೀನು ರಹಿತ ಅಪರಾಧವೆಂದು ಪರಿಗಣಿಸುವಂತೆ ಬ್ರಾಹ್ಮಣ ಸಮುದಾಯ ಆಗ್ರಹಿಸಿದೆ. ರಾಜಸ್ಥಾನ ವಿಧಾನಸಭೆಗೆ ಈ ವರ್ಷಾಂತ್ಯದಲ್ಲಿ ನಡೆಯುವ ಚುನಾವಣೆಗೂ ಮುನ್ನ ಎಲ್ಲಾ ಪ್ರಮುಖ ಸಮುದಾಯಗಳು ತಮ್ಮ ಪ್ರಾಬಲ್ಯವನ್ನು ತೋರಿಸಲು ಮತ್ತು ರಾಜಕೀಯ ಪ್ರಾತಿನಿಧ್ಯ ಪಡೆಯಲು ಜಾತಿ ಆಧಾರಿತ ಸಾಮೂಹಿಕ ಸಭೆಗಳನ್ನು ನಡೆಸಲಾರಂಭಿಸಿವೆ. ಈ ಮೊದಲು ಮಾರ್ಚ್ 5 ರಂದು ಜೈಪುರದಲ್ಲಿ ಜಾಟ್ ಸಮುದಾಯದ ಬೃಹತ್ ಸಭೆ ನಡೆದಿತ್ತು, ಅಲ್ಲಿ ಆಡಳಿತ ಮತ್ತು ವಿರೋಧ […]

ನಿಷ್ಕ್ರಿಯಗೊಂಡ ಉಪಗ್ರಹದ ಮರು ಪ್ರಯೋಗಕ್ಕೆ ಇಸ್ರೋ ಸಿದ್ಧತೆ

ಬೆಂಗಳೂರು, ಮಾ 6 – ಭಾರತೀಯ ಬಾಹ್ಯಾ ಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯು ನಿಷ್ಕ್ರಿಯಗೊಂಡಿರುವ ಭೂಮಿಯ ವಾತಾವರಣ ಅಧ್ಯಯನ ಉಪಗ್ರಹವಾದ ಮೇಘಾ-ಟ್ರೋಪಿಕ್ಸ್-1 (ಎಂಟಿ 1) ಮತ್ತೆ ಮರು ಕಾರ್ಯ ಪ್ರಯೋಗಕ್ಕೆ ಸಿದ್ಧತೆ ನಡೆಸುತ್ತಿದೆ. ಉಷ್ಣವಲಯದ ಹವಾಮಾನ ಅಧ್ಯಯನಕ್ಕಾಗಿ ಇಸ್ರೋ ಮತ್ತು ಫ್ರೆಂಚ್ ಬಾಹ್ಯಾಕಾಶ ಸಂಸ್ಥೆ ಸಿಎನ್‍ಇಎಸ್ ಜಂಟಿಯಾಗಿ ಎಂಟಿ 1 ಉಪಗ್ರಹವನ್ನು ಕಳೆದ 2011 ಅ. 12 ರಂದು ಉಡಾವಣೆ ಮಾಡಲಾಗಿತ್ತು. ಉಪಗ್ರಹದ ಕಾರ್ಯಾಚರಣೆಯ ಅವಧಿಯು ಮೂಲತಃ ಮೂರು ವರ್ಷಗಳಾಗಿದ್ದರೂ, ಉಪಗ್ರಹವು 2021 ರವರೆಗೆ ಪ್ರಾದೇಶಿಕ ಮತ್ತು […]

ಉಸ್ತುವಾರಿಗಳ ನೇಮಕ ಕಾರ್ಯಾರಂಭಕ್ಕೆ ಬಿಜೆಪಿ ಸೂಚನೆ

ಬೆಂಗಳೂರು,ಫೆ.10- ರಾಜ್ಯ ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ಆರಂಭಿಸಿರುವ ರಾಜ್ಯ ಬಿಜೆಪಿ ರಥಯಾತ್ರೆ, ಮೋರ್ಚಾಗಳ ಸಮಾವೇಶಕ್ಕೆ ಸಂಚಾಲಕರ ನೇಮಕ ಮಾಡಿದೆ. ಇದರ ಬೆನ್ನಲ್ಲೇ ರಾಜ್ಯ ರಾಜಧಾನಿಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ಚುನಾವಣಾ ಉಸ್ತುವಾರಿಗಳ ನೇಮಕ ಮಾಡಿದ್ದು, ತಕ್ಷಣದಿಂದಲೇ ಚುನಾವಣಾ ಸಿದ್ಧತೆ ಆರಂಭಕ್ಕೆ ಸೂಚನೆ ನೀಡಿದೆ. ಬೆಂಗಳೂರು ದಕ್ಷಿಣ ಜಿಲ್ಲೆ ವ್ಯಾಪ್ತಿ: ಗೋವಿಂದರಾಜನಗರ, ವಿಜಯನಗರ, ಚಿಕ್ಕಪೇಟೆ, ಬಸವನಗುಡಿ, ಪದ್ಮನಾಭನಗರ, ಬಿಟಿಎಂ ಲೇಔಟ್, ಜಯನಗರ, ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ, ಆನೇಕಲ್ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ಪ್ರಭಾರಿಗಳನ್ನು ನೇಮಕ ಮಾಡಿ ಜಿಲ್ಲಾಧ್ಯಕ್ಷ […]

ಬಜೆಟ್ ಮೂಲಕ ಜನಮನ ಗೆಲ್ಲಲು ಸಿಎಂ ತಯಾರಿ

ಬೆಂಗಳೂರು,ಜ.4- ಹಣಕಾಸು ಖಾತೆಯನ್ನು ಹೊಂದಿರುವ ಬಸವರಾಜ ಬೊಮ್ಮಾಯಿ ಅವರು ಫೆಬ್ರವರಿ 17ರಂದು ತಮ್ಮ ಸರ್ಕಾರದ ಕೊನೆಯ ಬಜೆಟ್ ಮಂಡಿಸಲಿದ್ದು, ಜನಪ್ರಿಯ ಯೋಜನೆ ಗಳನ್ನು ಘೋಷಿಸುವ ಮೂಲಕ ಮತದಾರರ ಮನಗೆಲ್ಲಲು ಮುಂದಾಗಿ ದ್ದಾರೆ. ಈಗಾಗಲೇ ಬಜೆಟ್ ಮಂಡನೆಗೆ ಅಗತ್ಯ ಸಿದ್ದತೆಗಳನ್ನು ಕೈಗೊಂಡಿ ರುವ ಅವರು ಈ ತಿಂಗಳ 2ನೇ ವಾರದ ನಂತರ ಇಲಾಖಾವಾರು ಸಚಿವರು ಮತ್ತು ಅಧಿಕಾರಿಗಳ ಪ್ರಗತಿ ಪರಿಶೀಲನೆ ನಡೆಸಿದ್ದಾರೆ. ಜ.1ರಂದು ಹೊಸ ವರ್ಷದ ಶುಭಾಷಯ ಕೋರಲು ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ್ದ ಸರ್ಕಾರದ ಮುಖ್ಯ ಕಾರ್ಯದರ್ಶಿ […]