ವಾಯುಭಾರ ಕುಸಿತ, ರಾಜ್ಯದಲ್ಲಿ ಇನ್ನೆರಡು ದಿನ ಮಳೆ

ಬೆಂಗಳೂರು,ನ.22- ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮೋಡ ಕವಿದ ವಾತಾವರಣವಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆ ಇಂದು ಬೆಳಗ್ಗೆಯಿಂದಲೇ ತುಂತುರು ಮಳೆಯಾಗುತ್ತಿದೆ. ಕಳೆದ ಒಂದು ವಾರದಿಂದ ಬಿಡುವು ಕೊಟ್ಟಿದ ಮಳೆ ಮತ್ತೆ ಆರಂಭವಾಗಿದೆ. ಬೆಳಗ್ಗೆಯಿಂದಲೇ ಪದೇ ಪದೇ ಹಗುರ ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ನಗರ ಪ್ರದೇಶಗಳಲ್ಲಿ ದೈನಂದಿನ ಕೆಲಸಗಳಿಗೆ ತೆರಳುವವರು ಕೊಡೆ, ಜರ್ಕಿನ್‍ಗಳ ಮೊರೆ ಹೋಗಿದ್ದ ದೃಶ್ಯ ಸಾಮಾನ್ಯವಾಗಿತ್ತು. ಆಗಾಗ್ಗೆ ತಂಪಾದ ಮೇಲ್ಮೈ ಗಾಳಿ ಬೀಸುತ್ತಿರುವುದರಿಂದ ಚಳಿಯ ಪ್ರಮಾಣವೂ ಹೆಚ್ಚಾಗಿದೆ. ರಾಜ್ಯದ ದಕ್ಷಿಣ […]

ಕಳಪೆ ಗುಣಮಟ್ಟದ ಕುಕ್ಕರ್ ಮಾರಾಟ : ಫ್ಲಿಪ್‍ಕಾರ್ಟ್ ಸಂಸ್ಥೆಗೆ 1ಲಕ್ಷ ದಂಡ

ನವದೆಹಲಿ,ಸೆ.24-ಗ್ರಾಹಕರಿಗೆ ಕಳಪೆ ಗುಣಮಟ್ಟದ ಕುಕ್ಕರ್ ಸರಬರಾಜು ಮಾಡಿದ ಫ್ಲಿಪ್ ಕಾರ್ಟ್ ಸಂಸ್ಥೆಗೆ ದೆಹಲಿ ಹೈಕೋರ್ಟ್ ಒಂದು ಲಕ್ಷ ದಂಡ ವಿಧಿಸಿದೆ. ಮಾತ್ರವಲ್ಲ ಸಂಸ್ಥೆಯಿಂದ ಮಾರಾಟ ಮಾಡಿರುವ ಎಲ್ಲಾ 598 ಕುಕ್ಕರ್‍ಗಳನ್ನು ಗ್ರಾಹಕರಿಂದ ವಾಪಸ್ ಪಡೆದು ಹಣ ಹಿಂತಿರುಗಿಸುವಂತೆಯೂ ಆದೇಶಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಂಸ್ಥೆ ಮಾರಾಟ ಮಾಡಿರುವ ಕುಕ್ಕರ್‍ಗಳು ಬಿಐಎಸ್ ಮಾನದಂಡ ಹೊಂದಿಲ್ಲ ಎಂದು ಸಿಸಿಪಿಎ ಹೊರಡಿಸಿದ ಆದೇಶದ ಮೇರೆಗೆ ಫ್ಲಿಪ್‍ಕಾರ್ಟ್ ಸಂಸ್ಥೆಗೆ ಒಂದು ಲಕ್ಷ ರೂ.ಗಳ ದಂಡ ವಿಧಿಸಿ, ದಂಡದ ಹಣವನ್ನು ನ್ಯಾಯಾಲಯದ ರಿಜಿಸ್ಟ್ರಾರ್ ಜನರಲ್ […]