ಪ್ರಧಾನಿ ಭದ್ರತಾಲೋಪದ ಕುರಿತು ವಿಷಾದ ವ್ಯಕ್ತಪಡಿಸಿದ ದೇವೇಗೌಡರು

ಬೆಂಗಳೂರು, ಜ.6- ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಭದ್ರತೆ ಬಗೆಗಿನ ವಿವಾದ ದುರದೃಷ್ಟಕರ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದ್ದಾರೆ. ದೇಶದ ಅತ್ಯುನ್ನತ ಕಾರ್ಯಾಂಗ ಆಡಳಿತಗಾರರಾದ ಪ್ರಧಾನಿಯವರ ರಕ್ಷಣೆ ವಿಷಯದಲ್ಲಿ ಹೀಗಾಗಬಾರದು. ನಾವು ಕಳೆದ ಘಟನೆಗಳಿಂದ ಪಾಠ ಕಲಿಯಬೇಕು ಎಂದು ದೇವೇಗೌಡರು ಟ್ವಿಟ್ ಮಾಡಿದ್ದಾರೆ. ರಸ್ತೆ ಮೂಲಕ ಪಂಜಾಬ್‍ನಲ್ಲಿ ಪ್ರಯಾಣಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಕೆಲವು ಪ್ರತಿಭಟನಾಕಾರರ ರಸ್ತೆತಡೆ, ಪ್ರತಿಭಟನೆಯಿಂದಾಗಿ 15-20 ನಿಮಿಷ ಫ್ಲೈಓವರ್ ಒಂದರ ಮೇಲೆಯೇ ಸಿಲುಕಿಕೊಳ್ಳಬೇಕಾಯಿತು. ಈ ಘಟನೆ ಪ್ರಧಾನಿಯವರ ಭದ್ರತೆಯಲ್ಲಿ ಆದ ಭಾರೀ […]