ಖೋಟಾ ನೋಟು ಮುದ್ರಣ-ಮಾರಾಟ : ನಾಲ್ವರು ಅಂತರರಾಜ್ಯ ಆರೋಪಿಗಳ ಸೆರೆ

ಬೆಂಗಳೂರು, ಜ.25- ಖೋಟಾ ನೋಟು ಮುದ್ರಣ ಮತ್ತು ಮಾರಾಟ ದಂಧೆಯಲ್ಲಿ ತೊಡಗಿದ್ದ ನಾಲ್ವರು ಅಂತರ್ ರಾಜ್ಯ ಆರೋಪಿಗಳನ್ನು ಸುಬ್ರಮಣ್ಯಪುರ ಠಾಣೆ ಪೊಲೀಸರು ಬಂಧಿಸಿ 10.34 ಲಕ್ಷ ಮೌಲ್ಯದ ಖೋಟಾ ನೋಟುಗಳು, ಕಾರು, ನಾಲ್ಕು ಮೊಬೈಲ್ ಹಾಗೂ ಇನ್ನಿತರ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ. ಆಂಧ್ರಪ್ರದೇಶದ ಕಡಪ ಜಿಲ್ಲೆಯ ಚರಣ್ ಸಿಂಗ್, ರಜನಿ ಮತ್ತು ಅನಂತಪುರ ಜಿಲ್ಲೆಯ ಗೋಪಿನಾಥ್ ಹಾಗೂ ರಾಜು ಬಂತ ಆರೋಪಿಗಳು. ಉತ್ತರಹಳ್ಳಿ- ಕೆಂಗೇರಿ ಮುಖ್ಯರಸ್ತೆಯಲ್ಲಿ ಇಬ್ಬರು ಖೋಟಾ ನೋಟು ಚಲಾವಣೆ ಮಾಡಲು ಬರುತ್ತಿದ್ದಾರೆಂಬ ಮಾಹಿತಿ ಮೇರೆಗೆ ಎಎಸ್‍ಐ […]