ಹೃದಯ ಹಾಗೂ ಆರೋಗ್ಯಕ್ಕೆ ಡೇಂಜರ್ ಎಲೆಕ್ಷನ್ ಟೆನ್ಷನ್

ಬೆಂಗಳೂರು,ಮಾ.13- ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ದೃವನಾರಾಯಣ್‍ರ ಹಠಾತ್ ಸಾವು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಹಾಗೂ ಸ್ಪರ್ಧಿಸುವ ನಾಯಕರಿಗೆ ಎಚ್ಚರಿಕೆಯ ಗಂಟೆಯಾಗಿದೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಆಕಾಂಕ್ಷಿಗಳ ಎದೆ ಬಡಿತ ಹೆಚ್ಚುತ್ತಿದೆ. ರಾಜಕೀಯ ಪಕ್ಷಗಳಿಗೆ ಈ ಬಾರಿ ಗೆದ್ದು ಅಧಿಕಾರ ಹಿಡಿಯಲೇಬೇಕಾದ ಉಮೇದು ತೀವ್ರವಾಗಿದೆ. ಅದಕ್ಕಾಗಿ ತಮ್ಮ ಕಾರ್ಯಕರ್ತರು, ನಾಯಕರ ಮೇಲೆ ಇನ್ನಿಲ್ಲದ ಒತ್ತಡ ಏರುತ್ತಿವೆ. ಹಗಲು ರಾತ್ರಿ ಬೇವರು ಹರಿಸಿ ಗೆಲುವಿಗಾಗಿ ಸಂಘರ್ಷ ನಡೆಸಲಾಗುತ್ತಿದೆ. ಇತ್ತೀಚಿನ ಎರಡು ಘಟನೆಗಳು ಚುನಾವಣೆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡವರಿಗೆ ಎಚ್ಚರಿಕೆ ಗಂಟೆಯಾಗಿವೆ. ಒಂದು ಮೇಘಾಲಯ […]

ಭಾರತೀಯರ ವೀಸಾ ಸಮಸ್ಯೆ ನಿವಾರಣೆಗೆ ಅಮೆರಿಕ ಆದ್ಯತೆ

ವಾಷಿಂಗ್ಟನ್,ಫೆ.22- ವೀಸಾ ವಿಳಂಬದ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಭಾರತ-ಅಮೆರಿಕಾ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಲು ಬೈಡೆನ್ ಆಡಳಿತ ಮುಂದಾಗಿದೆ. ವಿದೇಶಾಂಗ ಇಲಾಖೆಯು ಫೌಂಡೇಶನ್ ಫಾರ್ ಇಂಡಿಯಾ ಮತ್ತು ಇಂಡಿಯನ್ ಜೊತೆಗೆ ಆಯೋಜಿಸಿದ್ದ ದುಂಡುಮೇಜಿನ ಸಭೆಯಲ್ಲಿ ಭಾರತೀಯ ಸುದ್ದಿಗಾರರೊಂದಿಗೆ ಮಾತನಾಡಿದ ದಕ್ಷಿಣ ಏಷ್ಯಾ ಮತ್ತು ಮಧ್ಯ ಏಷ್ಯಾದ ಉಪ ಸಹಾಯಕ ಕಾರ್ಯದರ್ಶಿ ನ್ಯಾನ್ಸಿ ಜಾಕ್ಸನ್ ಅವರು, ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಟೋನಿ ಬ್ಲಿಂಕೆನ್ ಅವರಿಗೆ ವೀಸಾ ವಿಳಂಬ ಸಮಸ್ಯೆ ಬಗೆಹರಿಸುವುದೆ ಪ್ರಮುಖ ಆದ್ಯತೆಯಾಗಿದೆ ಎಂದು ತಿಳಿಸಿದ್ದಾರೆ. ನಮ್ಮ ಎರಡು ರಾಷ್ಟ್ರಗಳ […]