ಸರ್ಕಾರದ ಎಚ್ಚರಿಕೆ ಕ್ಯಾರೇ ಎನ್ನದ ಖಾಸಗಿ ಸಾರಿಗೆ ಬಸ್ ಮಾಲೀಕರು, ಶೇ.50ರಷ್ಟು ಟಿಕೆಟ್ ಹೆಚ್ಚಳ

ಬೆಂಗಳೂರು,ಆ.30-ಹಬ್ಬಗಳನ್ನೇ ಬಂಡವಾಳ ಮಾಡಿಕೊಳ್ಳುವ ಖಾಸಗಿ ಸಾರಿಗೆ ಬಸ್ ಮಾಲೀಕರು, ಸಂಸ್ಥೆಗಳು ರಾಜ್ಯ ಸರ್ಕಾರದ ಎಚ್ಚರಿಕೆ ನಡುವೆಯು ಸುಮಾರು ಶೇ.50ರಷ್ಟು ಟಿಕೆಟ್ ದರ ಹೆಚ್ಚಿಸಿದ್ದು, ಈ ದರ ಇನ್ನಷ್ಟು ಹೆಚ್ಚಾಗುವ ಆತಂಕ ಇದೆ. ಹಬ್ಬಗಳ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಉದ್ಯೋಗ ಮಾಡುವವರು ತಮ್ಮ ತಮ್ಮ ಊರುಗಳಿಗೆ ತೆರಳುತಿದ್ದು, ಇದರಿಂದ ಬಸ್, ರೈಲು ನಿಲ್ದಾಣಗಳಲ್ಲಿ ಜನ ಜಾತ್ರೆಯೇ ಕಂಡು ಬರುತ್ತಿದೆ. ಈ ವೇಳೆ ವಾರಗಳ ಮೊದಲೇ ಟಿಕೆಟ್ ಬುಕ್ ಮಾಡಿರುವವ ಸಂಖ್ಯೆ ತೀರಾ ಕಡಿಮೆ. ಇದನ್ನೆ ಬಂಡವಾಳ ಮಾಡಿಕೊಳ್ಳುವ ಖಾಸಗಿ ಸಾರಿಗೆ […]